ಮೈಸೂರು: ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ಸೃಷ್ಟಿಸಿದ್ದು ಆಂದೋಲನ ದಿನಪತ್ರಿಕೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕಟ್ಟಕಡೆಯ ವ್ಯಕ್ತಿಗೂ ಸಹ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜಶೇಖರ ಕೋಟಿರವರು ಆಂದೋಲನ ಪತ್ರಿಕೆಯನ್ನು ಸ್ಥಾಪಿಸಿದರು. ಈಗ ಆ ಪತ್ರಿಕೆ ಹಲವು ಏಳು-ಬೀಳು ಕಂಡು ಈಗ 50 ವರ್ಷಗಳನ್ನು ಪೂರೈಸಿರುವುದು ಸಂತಸದ ವಿಚಾರವಾಗಿದೆ. ಮತ್ತಷ್ಟು ವರ್ಷಗಳಲ್ಲಿ ಹೆಚ್ಚಿನ ಯಶಸ್ಸು ಕಂಡ ಮತ್ತಷ್ಟು ಜನರ ಪರವಾಗಿ ದುಡಿಯುವಂತಾಗಲಿ.
-ಎಸ್.ಟಿ.ರವಿಕುಮಾರ್, ಅಧ್ಯಕ್ಷ, ಜಿಲ್ಲಾ ಪತ್ರಕರ್ತರ ಸಂಘ