Mysore
31
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಒಂದೇ ನೋಟದಲ್ಲಿ ಗಮನ ಸೆಳೆದ 50 ರ ಸಂಚಿಕೆ

ಆಂದೋಲನ ದಿನಪತ್ರಿಕೆಯ ೫೦ ವರ್ಷಗಳ ಸಾರ್ಥಕ ಪಯಣದ ನೆನಪಿಗಾಗಿ ಹೊರತಂದ ೧೧೪ ಪುಟಗಳ ವಿಶೇಷ ಸಂಚಿಕೆಗೆ, ೫೦ರ ಸವಿನೆನಪಿನಲ್ಲಿ ಹಮ್ಮಿಕೊಂಡಿದ್ದ ಅರ್ಥಪೂರ್ಣ ಕಾರ್ಯಕ್ರಮಕ್ಕೆ  ಓದುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಓದುಗರ ಒಂದಷ್ಟು ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

ಕ್ರೀಡಾಪಟುಗಳ ಆಶಾಕಿರಣ ’ಆಂದೋಲನ’
ಪ್ರಾರಂಭದಿಂದಲೂ ಕ್ರೀಡೆಗೆ ನಾಯಕ ಪಟ್ಟವನ್ನು ಕಟ್ಟಿ ಪ್ರೋತ್ಸಾಹಿಸಿದ ದಿನಪತ್ರಿಕೆ ’ಆಂದೋಲನ’. ನಮ್ಮ ಹೃದಯದಲ್ಲಿ ನೆಲೆಸಿರುವ ಕೋಟಿಯವರು ಎಂತಹ ಒತ್ತಡದಲ್ಲೂ ಕಲೆ, ನಾಟಕ, ಸಂಸ್ಕೃತಿ ಹಾಗೂ ಕ್ರೀಡೆಯನ್ನು ಕಡೆಗಣಿಸಲಿಲ್ಲ ದಿನಪತ್ರಿಕೆಯು ನಡೆದು ಬಂದ ೫೦ ವರ್ಷಗಳ ಸಿಂಹಾವಲೋಕನ ಮಾಡಿದರೆ, ಪತ್ರಿಕಾ ಛಾಯಾಗ್ರಾಹಕರ ಚಾಣಾಕ್ಷತನ, ವರದಿಗಾರರ ನಿಖರತೆ, ಮುದ್ರಕರ ಬದ್ಧತೆ ಹಾಗೂ ಮುದ್ರಿತವಾದ ಸುದ್ದಿಯನ್ನು ಕಾಲಮೀರದಂತೆ ಮನೆ ಮನೆಗೆ ತಲುಪಿಸುವ ವಿತರಕರ ಶಿಸ್ತು ಶ್ಲಾಘಿಸುವಂತಹುದು. ಕೋಟಿ ಅಭಿಮಾನಿಗಳನ್ನು ಆಂದೋಲನ ಪತ್ರಿಕಾ ಬಳಗಕ್ಕೆ ನೀಡಿ ನಮ್ಮನ್ನು ಅಗಲಿದ ಸಂಸ್ಥಾಪಕರಿಗೆ ಕೋಟಿ ನಮನಗಳು
-ಎಸ್. ಅಚ್ಚುತ, ಸನ್ನದ್ದು ಲೆಕ್ಕಿಗ, ಮೈಸೂರು

ಪತ್ರಿಕೆ ಕ್ರಾಂತಿಕಾರಿಯಾಗಿ ಬೆಳೆದಿದೆ.
ಆಂದೋಲನ ಪತ್ರಿಕೆಯು ೫೦ರ ಸಾರ್ಥಕ ಪಯಣದ ಸಂದರ್ಭದಲ್ಲಿ ಹೊರ ತಂದಿರುವ ೧೧೪ ಪುಟಗಳ ಸಂಚಿಕೆ ಬಹಳ ಅಚ್ಚುಕಟ್ಟಾಗಿ, ಸೊಗಸಾಗಿ, ಸುಂದರವಾಗಿ ಮೂಡಿ ಬಂದಿದೆ. ಸಂಚಿಕೆಯನ್ನು ಓದಿ ಸಂಗ್ರಹಿಸಿಟ್ಟುಕೊಂಡಿದ್ದೇನೆ. ೧೯೮೮ರಿಂದಲೂ ಸಂಸ್ಥಾಪಕರಾದ ರಾಜಶೇಖರ ಕೋಟಿ ಅವರು ನನ್ನನ್ನು ಕಂಬದ ಸ್ವಾಮಿ ಎಂದೇ ಕರೆಯುತ್ತಿದ್ದರು. ಕೆ.ಆರ್.ನಗರ ತಾಲೂಕಿನಲ್ಲಿ ಆಂದೋಲನ ಪತ್ರಿಕೆ ಅಂದಿನಿಂದಲೂ ಕ್ರಾಂತಿಕಾರಿಯಾಗಿ ಬೆಳೆದಿದೆ.
ಗರುಡಗಂಭ ಸ್ವಾಮಿ, ರೈತ ಹೋರಾಟಗಾರರು, ಕೆ.ಆರ್.ನಗರ

 

ಕಾರ್ಯಕ್ರಮ, ಸಂಚಿಕೆ ಎರಡೂ ಚೆನ್ನಾಗಿತ್ತು
ಆಂದೋಲನ ೫೦ ಸಾರ್ಥಕ ಪಯಣದ ಕಾರ್ಯಕ್ರಮ ಮತ್ತು ಸಂಚಿಕೆ ಚೆನ್ನಾಗಿ ಮೂಡಿಬಂದಿದೆ. ಸಂಚಿಕೆಯಲ್ಲಿ ಪತ್ರಿಕೆಯು ಕಷ್ಟ, ನಷ್ಟ, ಸಣ್ಣ ಸಣ್ಣ ಸಂಭ್ರಮಗಳನ್ನು ಅನುಭವಿಸಿ ಸಾಗಿದ್ದನ್ನು ಸಾದರಪಡಿಸಿದ್ದು ಉತ್ತಮವಾಗಿದೆ. ಪತ್ರಿಕಾ ಬಳಗವು ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದೆ. ರಾಜಶೇಖರ ಕೋಟಿ ಅವರ ಜಾತ್ಯತೀತ ಮನೋಭಾವದ ಧೋರಣೆ ಅವರ ಕುಟುಂಬದವರಲ್ಲೂ ಇದೆ.
-ಎಂ.ಶಿವಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು. ಚಾ.ನಗರ.

 

ಸಂಚಿಕೆಯಲ್ಲಿ ಇತಿಹಾಸದ ದರ್ಶನ
ಒಂದು ಪುಟದಿಂದ ಪ್ರಾರಂಭವಾಗಿ ಈಗ ಐವತ್ತು ವರ್ಷ ಪೂರೈಸಿದ ನಂತರ ೧೧೪ಪುಟಗಳ ಮೂಲಕ ವಿಶೇಷ ಸಂಚಿಕೆಯನ್ನು ಹೊರತಂದಿರುವುದು ವಿಶೇಷ. ಐವತ್ತು ವರ್ಷಗಳ ಇತಿಹಾಸದ ಚಿತ್ರಣವನ್ನು ಸಂಕ್ಷಿಪ್ತವಾಗಿ ಸಂಚಿಕೆಯಾಗಿ ಹೊರತಂದಿರುವುದನ್ನು ನೋಡಿ ತುಂಬಾ ಖುಷಿಯಾಯಿತು. ವಿಶೇಷ ಸಂಚಿಕೆಯ ಮುಖಪುಟ, ವಿನ್ಯಾಸ ಒಂದೇ ನೋಟದಲ್ಲಿ ಗಮನ ಸೆಳೆಯಿತು. ಜನಪರ ಕಾಳಜಿ ಹೊಂದಿರುವ ಪತ್ರಿಕೆಗಳು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ
-ಶೈಲಾ ಸುಧಾಮಣಿ, ಅಧ್ಯಕ್ಷೆ, ತಾಲ್ಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟ, ಎಚ್.ಡಿ.ಕೋಟೆ ಮತ್ತು ಸರಗೂರು

 

ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ.
ಆಂದೋಲನ ದಿನಪತ್ರಿಕೆ ಆರಂಭದಿಂದಲೂ ವಿಭಿನ್ನತೆಯನ್ನು ಹೊಂದಿದೆ. ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾಗುವ ಹಾಡುಪಾಡು ಪುಟದ ಲೇಖನವೇ ವಿಶೇಷ. ಹಲವಾರು ಪೈಪೋಟಿಗಳ ನಡುವೆ ಪತ್ರಿಕೆ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡಿರುವುದು, ವಿಶೇಷ ಸಂಚಿಕೆ ಹೊರ ತಂದಿರುವುದು ಸಂತಸದ ವಿಚಾರ. ಪತ್ರಿಕೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ.

-ಈರಮಂಡ ವಿಜಯ್, ಕೊಡಂಬೂರು ಗ್ರಾಮ, ಮೂರ್ನಾಡು

 

ಸವಾಜದಲ್ಲಿ ದೊಡ್ಡ ಕ್ರಾಂತಿ ಸೃಷ್ಟಿಸಿದ ದಿನಪತ್ರಿಕೆ
ಆಂದೋಲನ ಪತ್ರಿಕೆ ಹಲವು ಏಳು-ಬೀಳು ಕಂಡು ಈಗ ೫೦ ವರ್ಷಗಳನ್ನು ಪೂರೈಸಿರುವುದು ಸಂತಸದ ಸಂಗತಿ. ತುಳಿತಕ್ಕೆ ಒಳಗಾದ ಕಟ್ಟಕಡೆಯ ವ್ಯಕ್ತಿಗೂ ಸಹ ಸಾವಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿ ಸವಾಜದಲ್ಲಿ ಒಂದು ದೊಡ್ಡ ಕ್ರಾಂತ್ರಿಯನ್ನು ಸೃಷ್ಟಿಸಿದ್ದು ಆಂದೋಲನ ದಿನಪತ್ರಿಕೆ. ಸವಾಜದಲ್ಲಿ ಕಂಡಿದೆ. ವಿಶೇಷ ಸಂಚಿಕೆಯನ್ನು ಇನ್ನೂ ಓದುತ್ತಿದ್ದೇನೆ.
ಎಚ್.ತ್ಯಾಗರಾಜು, ಜಿಪಂ ವಾಜಿ ಸದಸ್ಯರು. ಪಾಂಡವಪುರ.

 

 

ಪತ್ರಕರ್ತರಿಗೆ ಕೋಟಿ ದಾರಿದೀಪ
ಹಿಂದುಳಿದ ಸಮುದಾುಂಗಳಿಗೆ ಸಾವಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಅವರ ಪರವಾಗಿ ನಿಂತು ದುಡಿದ ಪತ್ರಿಕೆ. ನೊಂದವರ ಪರವಾಗಿ ಸ್ಪಂದಿಸಿ ಕೆಲಸ ವಾಡಿದ ಪತ್ರಿಕೆ ಎಂದರೆ ಅದು ಆಂದೋಲನ ಪತ್ರಿಕೆ. ೫೦ ವರ್ಷಗಳನ್ನು ಪೂರೈಸಿದ ಸಂದರ್ಭ ಹೊರ ತಂದ ಸಂಚಿಕೆ ನಮ್ಮಂತಹ ಓದುಗರ ಗಮನ ಸೆಳೆದಿದೆ. ಪತ್ರಿಕೆ ಶತಮಾನೋತ್ಸವ ಆಚರಿಸಿ ಮುನ್ನಡೆಯುವಂತಾಗಲಿ-
ಕೆ.ಬೋರಯ್ಯ, ರೈತಸಂಘದ ಹಿರಿಯ ಮುಖಂಡರು, ಮಂಡ್ಯ.

ರಾಜ್ಯ ಮಟ್ಟದ ಪತ್ರಿಕೆಗೆ ಸಮನಾದ ಕೆಲಸ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುದ್ರಣ ಮಾಧ್ಯಮ ಐವತ್ತು ವರ್ಷ ಪೂರೈಸುವುದು ಎಂಬುದು ಸಾಧನೆಯಾಗಿದೆ. ಅದರಲ್ಲೂ ವಸ್ತುನಿಷ್ಠ ವರದಿಗಳನ್ನು ಮಾಡುವ ಪತ್ರಿಕಾಧರ್ಮವನ್ನು ಎತ್ತಿಹಿಡಿದಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಿಕೆಯಿಂದ ಆಗುತ್ತಿದೆ. ಪ್ರಾದೇಶಿಕ ಪತ್ರಿಕೆಯೊಂದು ರಾಜ್ಯ ಮಟ್ಟದ ಪತ್ರಿಕೆಗೆ ಕಡಿಮೆಯಿಲ್ಲದಂತೆ ವಿಶೇಷ ಸಂಚಿಕೆಗಳನ್ನು ಹೊರ ತಂದಿರುವುದು ಅಭಿನಂದನಾರ್ಹ.
– ರಾಜೇಶ್ , ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಕುಶಾಲನಗರ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ