Mysore
22
few clouds

Social Media

ಗುರುವಾರ, 27 ಮಾರ್ಚ್ 2025
Light
Dark

ತಾಯಿ ಮಮತೆಯ ಕೋಟಿ ಹೃದಯ

‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರು ಕೇವಲ ಪತ್ರಿಕಾ ಸಂಪಾದಕರಾಗಿರಲಿಲ್ಲ. ಮೈಸೂರಿನ ಎಲ್ಲ ಜನಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಅದರ ಸಾಧಕ-ಬಾಧಕಗಳನ್ನು ಅವರು ಲೆಕ್ಕಿಸುತ್ತಿರಲಿಲ್ಲ. ಕಷ್ಟದಲ್ಲಿದ್ದವರಿಗೆ ಖುದ್ದು ಸಹಾಯ ಮಾಡುತ್ತಿದ್ದರು. ಅವರು ಮಾಡಿದ ಸಹಾಯವನ್ನು ಜನರು ಇಂದಿಗೂ ನೆನೆಪಿಸಿಕೊಳ್ಳುತ್ತಿದ್ದಾರೆ. ‘ಆಂದೋಲನ’ದ ಸಹಾಯ ಹಸ್ತ ಚಾಚಿದ ಕೆಲವು ಪ್ರಕರಣಗಳು ಇಲ್ಲಿವೆ.

ಎಂ.ಜಿ.ರಸ್ತೆ ಮಾರುಕಟ್ಟೆಗೆ ‘ಆಂದೋಲನ’ದ ರಟ್ಟೆ

ಮೊದಲು ಪಾರಂಪರಿಕ ಕಟ್ಟಡ ಲ್ಯಾನ್ಸ್‌ಡೌನ್ ಬಳಿ ತರಕಾರಿ ಮತ್ತು ರಸ್ತೆಬದಿ ವ್ಯಾಪಾರ ನಡೆಯುತ್ತಿತ್ತು. ಆದರೆ ಅಲ್ಲಿ ಪೊಲೀಸರು ಮತ್ತು ಲೇವಾದೇವಿದಾರರ ಕಾಟ ಅತಿಯಾಗಿತ್ತು. ಲ್ಯಾನ್ಸ್‌ಡೌನ್ ಕಟ್ಟಡಕ್ಕೆ ಕಾಯಕಲ್ಪ ಮತ್ತು ಪಾದಚಾರಿಗಳ ತೊಂದರೆ ನೆಪದಲ್ಲಿ ರಾಜ್ಯ ಸರ್ಕಾರ ವತ್ತು ಮಹಾನಗರಪಾಲಿಕೆ ಒಟ್ಟಾಗಿ ಅಲ್ಲಿಂದ ರಸ್ತೆಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿಬಿಟ್ಟರು. ನಂತರ ಕಾಡಾ ಕಚೇರಿ ಎದುರು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ೨೦೦೦ನೇ ಇಸವಿಯಲ್ಲಿ ಅಲ್ಲಿಂದಲೂ ಸ್ಥಳಾಂತರಿಸಿ, ದಸರಾ ವಸ್ತುಪ್ರದರ್ಶನದ ಎದುರು ಇರುವ ಕೊಳಚೆ ಪ್ರದೇಶವಾಗಿದ್ದ ದೊಡ್ಡಕೆರೆ ಮೈದಾನದಲ್ಲಿ ವ್ಯಾಪಾರ ಮಾಡಿಕೊಳ್ಳುವಂತೆ ಪಾಲಿಕೆ ಸೂಚಿಸಿತು.

ಆ ಜಾಗವನ್ನು ವ್ಯಾಪಾರಿಗಳು ದಸಂಸ ನೇತೃತ್ವದಲ್ಲಿ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರ ಬೆಂಬಲದಿಂದ ಸ್ವಚ್ಛಗೊಳಿಸಿ ಮೈದಾನವಾಗಿ ಸಿದ್ಧಪಡಿಸಿದರು. ಅಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಇರಲಿಲ್ಲ. ರಾಜಶೇಖರ ಕೋಟಿ ಅವರು ಸ್ವಂತ ಹಣದಿಂದ ಬೋರ್‌ವೆಲ್ ಕೊರೆಸಿದರು.

ನಂತರ ರಸ್ತೆಬದಿ ವ್ಯಾಪಾರಿಗಳಿಗೆ ಈ ನೆಲೆಯನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ದಸಂಸ ಮತ್ತು ‘ಆಂದೋಲನ’ ಜೊತೆ ಜೊತೆಗೇ ಹೋರಾಟ ನಡೆಸಿದವು.

ಮಾರುಕಟ್ಟೆ ಇರುವ ಸಾರ್ವಜನಿಕ ಜಾಗವನ್ನು ಕಬಳಿಸಲು ಭೂಮಾಫಿಯ ಷಡ್ಯಂತ್ರ ಆರಂಭಿಸಿದಾಗ ‘ಆಂದೋಲನ’ ಎಳೆಎಳೆಯಾಗಿ ವರದಿ ಮಾಡುವ ಮೂಲಕ ಭೂಮಾಫಿಯಾದ ಕಾಣದ ಕೈಗಳನ್ನು ಕಟ್ಟಿಹಾಕಿತ್ತು. ಈ ಸ್ಥಳ ಸರ್ಕಾರದ್ದು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ, ಭೂಮಾಫಿಯಾ ಗ್ಯಾಂಗ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ದಸಂಸ ಕೂಡ ಅದನ್ನು ಎದುರಿಸುತ್ತಿದೆ.

ಈ ಬೀದಿ ಬದಿ ವ್ಯಾಪಾರಿಗಳು ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದು, ಆರಂಭಿಕ ಬಂಡವಾಳವಾಗಿ ರಾಜಶೇಖರ ಕೋಟಿ ಅವರು ೨೫,೦೦೦ ರೂ., ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ಅವರು ೧೦,೦೦೦ ರೂ. ನೀಡಿದ್ದರು. ಈ ಸಹಕಾರ ಸಂಘ ಈಗ ವಾರ್ಷಿಕ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಬೀದಿ ಬದಿ ವ್ಯಾಪಾರಸ್ಥರ ಎಲ್ಲ ಹೋರಾಟಗಳಲ್ಲೂ ‘ಆಂದೋಲನ’ ದಿನಪತ್ರಿಕೆಯು ಮುಖ್ಯ ಪಾತ್ರವಹಿಸಿದೆ ಎಂಬುದು ದಸಂಸದ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅವರ ಅಂತರಂಗದ ಮಾತು.

ರಸ್ತೆ ಬದಿ ವ್ಯಾಪಾರಿಗಳ ಬದುಕನ್ನು ಮತ್ತೆ ಕಟ್ಟಿಕೊಡುವ ಹೋರಾಟದಲ್ಲಿ ರಾಜಶೇಖರ ಕೋಟಿ ಅವರು ಮುಂಚೂಣೆಯಲ್ಲಿ ನಿಂತದ್ದಷ್ಟೇ ಅಲ್ಲ, ಹೋರಾಟದ ಖರ್ಚು ವೆಚ್ಚವನ್ನೆಲ್ಲಾ ಅವರೇ ಭರಿಸುತ್ತಿದ್ದರು. ಅವರ ಮಾನವೀಯತೆ, ಪ್ರೀತಿ, ಕಾಳಜಿಯನ್ನು ಬಣ್ಣಿಸಲು ಪದಪುಂಜವೇ ಸಾಲದು. -ಬೆಟ್ಟಯ್ಯ ಕೋಟೆ, ದಸಂಸದ ಜಿಲ್ಲಾ ಸಂಚಾಲಕ.


ಲಾತೂರ್ ಭೂಕಂಪ ಸಂತ್ರಸ್ತರಿಗೆ ಸಹಾಯ ಹಸ್ತ

೧೯೯೩ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ಸಂಭವಿಸಿತ್ತು. ಅದರಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಸಹಾಯ ಮಾಡುವುದಕ್ಕಾಗಿ ‘ಆಂದೋಲನ’ ದಿನಪತ್ರಿಕೆ ವತಿಯಿಂದ ಸಂತ್ರಸ್ತರ ಪರಿಹಾರ ನಿಧಿ ಸ್ಥಾಪಿಸಲಾಗಿತ್ತು. ಅದರಿಂದ ಸಂಗ್ರಹವಾದ ೨ ಲಕ್ಷ ರೂ.ಗಳನ್ನು ಚೆಕ್ ಮೂಲಕ ಸಂಪಾದಕರಾದ ರಾಜಶೇಖರ ಕೋಟಿ ಅವರು ‘ಪತ್ರಿಕೆ’ಯ ನಂಜನಗೂಡು ವರದಿಗಾರ ಶ್ರೀಧರ್ ಆರ್. ಭಟ್ ಅವರಿಗೆ ಕೊಟ್ಟು, ಖುದ್ದು ಮುಂಬೈಗೆ ಕಳುಹಿಸಿ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವಾರ್ ಅವರಿಗೆ ನೇರವಾಗಿ ತಲುಪಿಸಿದ್ದರು.

ಗುಜರಾತ್ ರಾಜ್ಯದ ಭುಜ್‌ನಲ್ಲಿ ೨೦೦೧ರಲ್ಲಿ ಭೂಕಂಪ ಸಂಭವಿಸಿದಾಗಲೂ ‘ಪತ್ರಿಕೆ’ ಇದೇ ರೀತಿಯಲ್ಲಿ ಸಂತ್ರಸ್ತರ ಪರಿಹಾರ ನಿಧಿ ಸ್ಥಾಪಿಸಿತ್ತು. ೫೨ ದಿನಗಳವರೆಗೆ ಒಟ್ಟು ೧೧,೧೩,೪೧೯ ರೂ.ಗಳನ್ನು ಸಂಗ್ರಹಿಸಲಾಗಿತ್ತು. ಆ ಹಣವನ್ನು ಮೈಸೂರು ನಾಗರಿಕ ವೇದಿಕೆ ಸಹೋಂಗದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲುಪಿಸಲಾಗಿತ್ತು. ಇದು ರಾಜಶೇಖರ ಕೋಟಿ ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ.


ಕಾರ್ಗಿಲ್‌ ಹುತಾತ್ಮ ಯೋಧರ ಕುಟುಂಬಗಳಿಗೆ ಪರಿಹಾರ ನಿಧಿ ಸ್ಥಾಪನೆ

೧೯೯೯ರಲ್ಲಿ ನಡೆದ ಕಾರ್ಗಿಲ್ ಯದ್ಧದಲ್ಲಿ ರಾಜ್ಯದ ೧೮ ಯೋಧರು ಹುತಾತ್ಮರಾಗಿದ್ದರು. ಸಂತ್ರಸ್ತ ಕುಟುಂಬಗಳ ನೆರವಿಗೆ ಮೈಸೂರಿನಲ್ಲಿ ಹಲವಾರು ಸಂಘಟನೆಗಳು ಮುಂದಾಗಿದ್ದವು. ಆ ಸಂದರ್ಭದಲ್ಲಿ ರಾಜಶೇಖರ ಕೋಟಿ ಅವರು, ಪತ್ರಿಕೆಯ ಮೂಲಕ ಪರಿಹಾರ ನಿಧಿ ಸ್ಥಾಪಿಸಿದರು. ನಿಧಿಗೆ ದೇಣಿಗೆ ನೀಡಿದ ದಾನಿಗಳ ಹೆಸರನ್ನು ಪ್ರತಿದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿತ್ತು. ೫೫ ದಿನಗಳವರೆಗೆ ಒಟ್ಟು ೨೬,೩೮,೩೦೯ ರೂ. ಸಂಗ್ರಹವಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಮಡಿಕೇರಿಯ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ೧೯೯೯ರ ಆ.೧೭ರಂದು ಮಡಿಕೇರಿಯಲ್ಲಿ ಆಂದೋಲನ ವತಿಯಿಂದ ಸರಳ ಕಾರ್ಯಕ್ರಮವನ್ನು ಆಯೋಜಿಸಿ, ಸಂತ್ರಸ್ತ ಕುಟುಂಬಗಳಿಗೆ ತಲಾ ೧ ಲಕ್ಷ ರೂ.ಗಳನ್ನು ನೇರವಾಗಿ ನೀಡಲಾಗಿತ್ತು.

ಇದಲ್ಲದೆ, ೧೯೯೯ರ ಆಗಸ್ಟ್ ೩೧ರಂದು ಮೈಸೂರಿನಲ್ಲಿ ರಾಮಾನುಜ ರಸ್ತೆಯಲ್ಲಿದ್ದ ‘ಆಂದೋಲನ ಭವನ’ದಲ್ಲಿ ಸರಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉತ್ತರ ಕರ್ನಾಟಕದ ೧೦ ಹುತಾತ್ಮ ಯೋಧರ ಸಂತ್ರಸ್ತ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ನೀಡಲಾಗಿತ್ತು. ಅಲ್ಲದೆ, ಕಾರ್ಯಕ್ರಮದ ಬಳಿಕ ಬಂದ ಇನ್ನೆರಡು ಸಂತ್ರಸ್ತ ಕುಟುಂಬಗಳಿಗೂ ತಲಾ ೧ ಲಕ್ಷ ರೂ. ನೆರವು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ, ಮೈಸೂರು ನಗರಪಾಲಿಕೆ ಆಯುಕ್ತ ಡಾ.ಬೋರೇಗೌಡ, ನಗರ ಪೊಲೀಸ್ ಆಯುಕ್ತ ಕೆಂಪಯ್ಯ ಅವರು ಪಾಲ್ಗೊಂಡಿದ್ದರು.


ಪತ್ರಿಕಾ ವಿತರಕರ ಅಭಿವೃದ್ಧಿಗೆ ಕೊಡುಗೆ

‘ಆಂದೋಲನ’ ದಿನಪತ್ರಿಕೆಯ ಸಾಮಾಜಿಕ ಕಳಕಳಿಯ ವಿಸ್ತಾರ ದೊಡ್ಡದಾಗಿದೆ. ವಿದ್ಯಾರ್ಥಿಗಳು, ರಸ್ತೆಬದಿ ವ್ಯಾಪಾರಿಗಳು ಮಾತ್ರವಲ್ಲದೆ, ಎಲ್ಲ ದಿನಪತ್ರಿಕೆಗಳ ಆಧಾರಸ್ತಂಭವೇ ಎನ್ನಬಹುದಾದ ಪತ್ರಿಕಾ ವಿತರಕರ ಬವಣೆಗಳಿಗೂ ‘ಆಂದೋಲನ’ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಪತ್ರಿಕಾ ವಿತರಕರ ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ೫೦,೦೦೦ ರೂ. ದೇಣಿಗೆ ನೀಡಿದ್ದರು.

ಆಟೋ ರಿಕ್ಷಾ ಚಾಲಕರು, ಪತ್ರಿಕಾ ವಿತರಕರಿಗೂ ಧನಸಹಾಯದ ಹಸ್ತ ಚಾಚಿತ್ತು. ‘ಪತ್ರಿಕೆ’ಯ ಸಂಸ್ಥಾಪಕರಾದ ರಾಜಶೇಖರ ಕೋಟಿ ಅವರು ಒತ್ತಾಸೆಯಾಗಿ ನಿಂತು ಉತ್ತೇಜಿಸಿದ ಕಾರಣ ‘ಮೈಸೂರು ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘ’ ಸ್ಥಾಪನೆಯಾಯಿತು. ಅದಕ್ಕೆ ಕೋಟಿ ಅವರು ಆರಂಭಿಕ ಬಂಡವಾಳವನ್ನೂ ಒದಗಿಸಿದ್ದರು ಎಂಬುದು ಉಲ್ಲೇಖಾರ್ಹ.


ಭುಜ್ ಭೂಕಂಪ ಸಂತ್ರಸ್ತರಿಗೆ ನೆರವಿನ ನೆರಳು

‘ಆಂದೋಲನ’ದ ಮಾನವೀಯತೆಗೆ ನಲ, ಭಾಷೆ, ಧರ್ಮಗಳ ಗಡಿ ಇಲ್ಲ, ‘ಆಂದೋಲನ’ದ ಸಹಾಯಹಸ್ತ ಕನ್ನಡನಾಡಿನ ಗಡಿಯಾಚೆಗೂ ಚಾಚಿರುವುದೇ ಇದಕ್ಕೆ ಸಾಕ್ಷಿ, ಗುಜರಾತ್ ರಾಜ್ಯದ ಬುಜ್‌ನಲ್ಲಿ 2001, ಜ.26ರಂದು ಭೂಕಂಪ ಸಂಭವಿಸಿತ್ತು. ರಿಕ್ಟರ್ ಭೂಮಾಪಕದಲ್ಲಿ 8,64ರಷ್ಟು ತೀವ್ರತೆ ದಾಖಲಾಗಿತ್ತು. ಸುಮಾರು 9 ಕಿ.ಮೀ. ಸುತ್ತಳತೆಯಲ್ಲಿ ಭೂಮಿ ನಡುಗಿತ್ತು. 20 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. 1.60 ಲಕ್ಷಕ್ಕೂ ಅಧಿಕ ಜನರು ಗಾಯಗೊಂಡಿ ದ್ದರು. ಸಾವಿರಾರು ಮನೆಗಳು, ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು. ‘ಪತ್ರಿಕೆ’ ವತಿಯಿಂದ ಭುಜ್ ಭೂಕಂಪನದ ಸಂತ್ರಸ್ತರಿಗಾಗಿ ಪರಿಹಾರ ನಿಧಿಯನ್ನು ಸ್ಥಾಪಿಸಿ, 52 ದಿನಗಳವರೆಗೆ ಒಟ್ಟು 11,13,419 ರೂ.ಗಳನ್ನು ಸಂಗ್ರಹಿಸಲಾಗಿತ್ತು. ಆ ಹಣವನ್ನು ಮೈಸೂರು ನಾಗರಿಕ ವೇದಿಕೆ ಸಹಯೋಗದಲ್ಲಿ ಸಂತಸ ಕುಟುಂಬಗಳಿಗೆ ತಲುಪಿಸಲಾಗಿತ್ತು.


ರಾಮಾಪುರ ಬಸ್‌ ಅಪಘಾತ ಸಂತ್ರಸ್ತರ ನಿಧಿ

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಸಮೀಪ ಒಂದು 300 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದ್ದರಿಂದ 8 ಪ್ರಯಾಣಿಕರು ಸಾವಿಗೀಡಾದ ದುರಂತ ಘಟನೆ 1098, ಜೂ 7ರಂದು ನಡೆದಿತ್ತು. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ‘ಅಂದೋಲಾದಲ್ಲಿ ಈ ದುರ್ಘಟನೆ ವಿಸ್ತತವಾಗಿ ವರದಿಯಾಗಿತ್ತು. ಸತ್ತವರ ಕುಟುಂಬಗಳ ಅರಣ್ಯರೋದನ ಗಾಯಗೊಂಡವರ ಆಕ್ರಂದನ ರಾಜಶೇಖರ ಕೋಟಿಯವರ ಮನಸ್ಸನ್ನು ಕಾಡಿತ್ತು, ತಮ್ಮಿಂದ ಆ ಎಲ್ಲ ಸಂತ್ರಸ್ತ ಕುಟುಂಬಗಳಿಗೂ ಏನು ಮಾಡ: ಹುದು ಎಂದು ಚಿಂತಿಸಿದ ಅವರಿಗೆ ಹೊಳೆದದ್ದು, ಸಂತ್ರಸ್ತರ ನೆರವು ನಿಧಿ ಸ್ಥಾಪನೆ ಪತ್ರಿಕೆಯಲ್ಲಿ ರಾಮಾಪರ ಅಪಘಾತ ಸಂತ್ರಸ್ತರ ಪರಿಹಾರ ನಿಧಿ ಸ್ಥಾಪಿಸಿದರು. ಓದುಗರು, ದಾನಿಗಳು, ಗಣ್ಯರಿಂದ ಹರಿದುಬಂದ ದೇಣಿಗೆಯ ನಿಧಿಯನ್ನು ಸಂತ್ರಸ್ತರಿಗೆ ತಲುಪಿಸಲಾಯಿತು.


ಆಟೋ ರಿಕ್ಷಾ ಚಾಲಕರಿಗೂ ಸಹಾಯಹಸ್ತ

ಆಟೋ ರಿಕ್ಷಾ ಚಾಲಕರು ಆಂದೋಲನ ಧನಸಹಾಯದ ಹಸ್ತ ಚಾಚಿತ್ತು. ಪತ್ರಿಕೆಯ ಸಂಸ್ಥಾಪಕರಾದ ರಾಜಶೇಖರ ಕೋಟಿ ಅವರು ಒತ್ತಾಸೆಯಾಗಿ ನಿಂತು ಉತ್ತೇಜಿಸಿದ ಕಾರಣ ‘ಮೈಸೂರು ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಯಾಯಿತು, ಆದರೆ ಕೋಟಿ ಅವರು ಆರಂಭಿಕ ಬಂಡವಾಳವನ್ನೂ ಒದಗಿಸಿದ್ದರು ಎಂಬುದು ಉಲ್ಲೇಖಾರ್ಹ.

ಆಟೋ ಚಾಲಕರಿಗೆ ಸಾಲ ಕೊಡಿಸಲು ಸ್ವಂತ ಮನೆ ಅಡವಿಟ್ಟಿದ್ದ ಕೋಟಿ ದಂಪತಿ: ಮಾನವೀಯ ಮೌಲ್ಯಗಳಿಗೆ ಸಾಗರವನ್ನೂ ಮೀರಿದ ವೈಶಾಲ್ಯತೆ ಇದೆ, ಮನುಷ್ಯನೊಬ್ಬ ಮಾನವತೆಯ ಸ್ಪರ್ಶಕ್ಕೆ ಸಿಕ್ಕಿದರೆ, ಬಹುಶಃ ಸಂತ, ಸ್ವಾರ್ಥ ಎಂಬ ಪದಗಳು ಅರ್ಥಹೀನವಾಗುತ್ತವೆ ಅನಿಸುತ್ತದೆ. ಇದಕ್ಕೆ ರಾಜಶೇಖರ ಕೋಟಿಯವರ ಬದುಕಿನ ದೃಷ್ಟಾಂತವೊಂದು ಇಲ್ಲಿದೆ.

ಕೋಟಿ ಅವರು ಮೈಸೂರು ಆಟೋರಿಕ್ಷಾ ಮಾಲೀಕರು ಮತ್ತು ಜಲಕರ ವಿವಿಧೋದ್ದೇಶ ಸಹಕಾರ ಸಂಘದ ಮಹಾಪೋಷಕರಾಗಿದ್ದರು. ಸಂಘದ ನೋಂದಣಿ ನಂತರ ಸಂಘದ ವತಿಯಿಂದ 50 ಮಂದಿ ಸದಸ್ಯರಿಗೆ ತಲಾ 10 ರೂ ಗಂತ ಸಾಲ ನೀಡಲಾಗಿತ್ತು. ಮತ್ತೆ ಸೇಘಕ್ಕೆ 10 ಲಕ್ಷ ರೂ.ಗಳ ಕೊರತೆ ಉಂಟಾಗಿತ್ತು, ಅದನ್ನು ಸಂಘದ ಪದಾಧಿಕಾರಿಗಳು ಕೋಟಿ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸಂಘದವ ರನ್ನು ಜೊತೆಗೂಡಿಸಿಕೊಂಡು ಕೋಟಿಯವರು ದಿ. ಮೈಸೂರು ಮರ್ಚೆಂಟ್ಸ್‌ ಕೋ-ಆಪರೇಟಿವ್‌ ಬ್ಯಾಂಕ್‌ಗೆ ತೆರಳಿದರು. ಅಲ್ಲಿ ಆಟೋ ಚಾಲಕರ ಸಹಕಾರ ಸಂಘಕ್ಕೆ ಸಾಲ ಕೊಡಿಸುವ ಬಗ್ಗೆ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬ್ಯಾಂಕ್ ಅಧಿಕಾರಿಗಳು ಎಲ ನೀಡಲು ಮತ್ತ ಭದ್ರತೆಯನ್ನು ಕೇಳಿದ್ದಾರೆ. ಮನೆಗೆ ದೂರವಾಣಿ ಕರೆ ಮಾಡಿದ ಕೋಟಿಯವರು ಪತಿ ನಿರ್ಮಲ ಕೋಟಿ ಅವರನ್ನು ಬ್ಯಾಂಕ್‌ ಕರೆ‍ಸಿಕೊಂಡಿದ್ದಾರೆ. ಅಲ್ಲಿ ಕೋಟಿಯವರು ಹೇಳಿದ ಪೇವರ್‌ಗಳಿಗೆ ನಿರ್ಮಲ ಅವರು ಯಾವುದೇ ಅಸಹನೆ, ಅನುಮಾನಗಳಿಲ್ಲದೆ ಸಹಿ ಮಾಡಿದ್ದಾರೆ. ಹೌದು, ಅವರು ಆಟೋ ಚಾಲಕರ ಸಂಘಕ್ಕೆ ಸಾಲ ಕೊಡಿಸುವುದಕ್ಕಾಗಿ ಒದಗಿಸಿದ ಭದ್ರತೆ ಏನೆಂದು ಗೊತ್ತಾ? ಮನೆಯನ್ನೇ ಬ್ಯಾಂಕ್‌ಗೆ ಅಡವಿಟ್ಟು ಸಾಲ ಕೊಡಿಸಿದ್ದರು. ಸಂಘದವರು. ಈ ದಂಪತಿಯ ಕಕ್ಕುಲತೆಗೆ ಬೆರಗಾಗಿದ್ದು, ಸಾಲ ಪಡೆಯಲು ಹಿಂದೆ ಮುಂದ ಸೋರಿದ್ದಾರೆ. ಆಗ ಕರ್ಮಲ ಕೋಟೆ ಅವರು: “ನಿಮಗೆ ಒಳ್ಳೆಯದಾಗಲಿ ಎಂದು ಹರಸಿದ್ದರು. ಆದರೆ, ಸಂಪದವರು ಇಲ್ಲದ ಮೊತ್ತವನ್ನು 4 ಲಕ್ಷ ರೂ.ಗಳಿಗೆ ಉಳಿಸಿಕೊಂಡರು.

ನಮ್ಮ ಇದುವರೆಗಿನ ಹಲವು ಏರಿಳಿತಗಳಲಿ ಹಲವಾರು ಗಣ್ಯರು ನಮ್ಮ ಸಂಪರ್ಕಕ್ಕೆಬಂದಿದ್ದಾರೆ. ಕೆಲವರು ಅನುಕಂಪ ತೋರಿದ್ದಾರೆ. ಆದರೆ ರಾಜಶೇಖರ ಕೋಟಿ ಅವರು ನಮ್ಮೊಡನೆ ಸಂಪರ್ಕ ಬೆಳೆಸಿದ ಮೊದಲ ದಿನದಿಂದಲೇ ನಮ್ಮ ಹೃದಯಕ್ಕೆ ಹತ್ತಿರವಾದವರು. -ಆಟೋ ಚಾಲಕರ ಸಂದರ ಮುಖಂಡ, ಮೈಸೂರು,


ಕ್ರೀಡಾ ಕ್ಷೇತ್ರಕ್ಕೂ ಕೊಡುಗೆ

ರಾಜಶೇಖರ ಕೋಟಿ ಅವರು ಸ್ವತಃ ಪುಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಅಂತರ ಶಾಲಾ ಮಕ್ಕಳಿಗಾಗಿ ಹಾಕಿ ದಂತಕತೆ ಧ್ಯಾನ್‌ ಚಂದ್‌ ಅವರ ನನಪಿನಲ್ಲಿ ಆಂದೋಲನ ಪಾಕಿ ಕಪ್ ಪಂದ್ಯಾವಳಿಯನ್ನು ನಡೆಸಲು ಉತ್ತೇಜನ ನೀಡಿದ್ದರು. ವಿಜೇತರಿಗೆ ಆಂದೋಲನದ ವತಿಯಿಂದ ‘ಆಂದೋಲನ ದಿನಪತ್ರಿಕೆಯ ಹೆಸರಿನಲ್ಲಿ ಕಟ್ ನೀಡಲಾಗುತ್ತದೆ. ಗಾಲ್ಫ್ ಕ್ರೀಡಾಕೂಟಕ್ಕೂ ಕೋಟಿ ಅವರು ಪ್ರೋತ್ಸಾಹ ನೀಡುತ್ತಿದ್ದರು. ಗಾಲ್ಫ್ ಆಟಕ್ಕೂ ಒತ್ತಾಸೆಯಾಗಿದ್ದರು. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ಹಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಕಪ್ ಪ್ರಾಯೋಜಕತ್ವ ಮಾಡಿದ್ದರು ಎಂಬುದು ಅವಿಸ್ಮರಣೀಯ.


ನೆರೆ ದೇಶದ ಭೂಕಂಪನ ಸಂತ್ರಸ್ತರಿಗೂ ಅಭಯಹಸ್ತ

2005, ಏಪ್ರಿಲ್ 25ರಂದು ನೆರೆಯ ನೇಪಾಳ ದೇಶದಲ್ಲಿ ಭೀಕರ ಭೂಕಂಪನವಾಗಿತ್ತು. ರಿಕ‌ ಭೂಮಾಪಕದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿತ್ತು. 9,000ಕ್ಕೂ ಹೆಚ್ಚು ಮಂದಿಯ ಜೀವ ಹರಣವಾಗಿದ್ದು, 22,000 ಮಂದಿ ಗಾಯಗೊಂಡಿದ್ದರು. ಬೃಹತ್ ಕಟ್ಟಡಗಳು ನೆಲಸಮವಾಗಿದ್ದವು. ದೂರದರ್ಶನದಲ್ಲಿ ಈ ಸಂಗತಿ ಬಿತ್ತರವಾಗುತ್ತಿದ್ದಂತೆ ಇತ್ತ ರಾಜಶೇಖರ ಕೋಟಿ ಅವರ ಚಿತ್ರದಲ್ಲಿ ತಳಮಳ ಶುರುವಾಗಿಬಿಟ್ಟಿತು. ಹಿಂದೊಮ್ಮೆ ಆ ದೇಶಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಪ್ರಕೃತಿ ಸೌಂದಯ್ಯಕ್ಕೆ ಕೋಟಿಯವರು ಮಾರುಹೋಗಿದ್ದರು. ಆದರೆ, ಭೂಕಂಪನದಿಂದ ಅವೆಲ್ಲ ಅಕ್ಷರಶಃ ಛಿದ್ರವಾಗಿಹೋಗಿದ್ದವು. ಟಿವಿಯಲ್ಲಿ ಭೂಕಂಪದ ಭೀಕರತೆಯ ಸುದ್ದಿ ನೋಡುತ್ತಿದ್ದಂತೆ, ಸಂತ್ರಸ್ತರಿಗಾಗಿ ಪರಿಹಾರ ನಿಧಿ ಸ್ಥಾಪಿಸಲು ನಿರ್ಧರಿಸಿದರು. ಸಹಜವಾಗಿ ಅಂದುಕೊಂಡದ್ದನ್ನೂ ಮಾಡಿದರು. ಪತ್ರಿಕೆಯ ವತಿಯಿಂದ ಸ್ವತಃ 25,000 ರೂ.ಗಳನ್ನು ಹಾಕಿ ನಂತರ ಅದರೊಂದಿಗೆ ಸಹೃದಯ ದಾನಿಗಳಿಂದ ಸಂಗ್ರಹವಾದ ಹಣವನ್ನು ಪ್ರಧಾನ ಮಂತ್ರಿಗಳ ಕಚೇರಿಯ ಮೂಲಕ ನೆರೆಯ ನೇಪಾಳಕ್ಕೆ ತಲುಪಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ