Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ನಂಜನಗೂಡು ಟೌನ್‌ ಆಗಿ ಗೆಜೆಟ್‌ನಲ್ಲಿ ಪ್ರಕಟ

1908ರ ಮಾರ್ಚ್‌ 28ರಂದು ಅಂದಿನ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿ ನಂಜನಗೂಡನ್ನು ‘ಟೌನ್‌’ ಎಂದು ಕರೆದು, ಇಲ್ಲಿ ೧೫ ಸ ದಸ್ಯರ ಪುರಸಭೆಯ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆಗಿನ ಕಾಲಕ್ಕೆ ಈ ಊರಿನಲ್ಲಿದ್ದ ಅನೇಕ ಗಣ್ಯ ವ್ಯಕ್ತಿಗಳು ಇದರ ಸದಸ್ಯರಾಗಿ ಎಲ್ಲ ಕಾಲಕ್ಕೂ ಆದರ್ಶವೆನ್ನಿಸುವ ರೀತಿಯಲ್ಲಿ ಸೇವೆ ಸಲ್ಲಿಸಿ ದಾರೆ. ಮೊದಲು ದಳವಾಯಿ ಕಟ್ಟಡ ದಲ್ಲಿಯೇ ಪುರಸಭೆಯ ಕಾರ್ಯಾಲಯ ಇತ್ತು. ಈಗಿನ ನಗರಸಭೆಯ ಕಟ್ಟಡವನ್ನು ಉ ದ್ಘಾಟಿಸಿ ದವರು ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್‌ ಅವರು. ಆದರೆ, ಆ ಸಮಯದಲ್ಲಿ ನಂಜನಗೂಡಿನಲ್ಲಿ ಕಾಲರಾ ಇದ್ದುದರಿಂದ ಮಹಾರಾಜರಿಗೆ ಆತಿಥ್ಯ ನೀಡುವ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಯಿತು. ಕಡೆಗೆ, ಉದ್ಘಾಟನೆ ನಡೆ ದ ನಂತರ ಮಹಾರಾಜರಿಗೆ ಬೇಗೂರಿನ ಪ್ರವಾಸಿಮಂದಿರ ದಲ್ಲಿ ಭೋಜನಕ್ಕೆ ಏರ್ಪಾಡು ಮಾಡಲಾಗಿತ್ತು. ೧೯೦೦ರ ವೇಳೆಗೆ ನಂಜನಗೂಡಿನಲ್ಲಿ ಜ್ಯೂಯರ್‌ ವಾಟರ್‌ ಫಿಲ್ಟರ್‌ ವ್ಯವಸ್ಥೆ ಮೂಲಕ ಶು ದ್ಧ ನೀರನ್ನು ಪೂರೈಸಲಾಗುತ್ತಿತ್ತು. ಆಗಿನ ಕಾಲಕ್ಕೆ ಇಡೀ ರಾಜ್ಯದಲ್ಲಿ ಬೆಂಗಳೂರು, ಮೈಸೂರು ಬಿಟ್ಟರೆ ಈ ಊರಿನಲ್ಲಿಯೇ ಅಂತಹ ಏರ್ಪಾಡು ಇದ್ದದ್ದು. ಹಳೆಯ ಬಸ್‌ ಸ್ಟ್ಯಾಂಡ್‌ ಮತ್ತು ಟೌನ್‌ ಟೆನ್ನಿಸ್‌ ಕ್ಲಬ್‌ ಇರುವ ಜಾಗದಲ್ಲಿ ಇದಕ್ಕೆ ಏರ್ಪಾಡು ಮಾಡಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!