Mysore
22
broken clouds

Social Media

ಶುಕ್ರವಾರ, 14 ನವೆಂಬರ್ 2025
Light
Dark

ಜಾತಿ, ಧರ್ಮದ ಕಾಲಂನಲ್ಲಿ ‘ಮಾನವೀಯ’ ಅಂತ ಬರೆಸಲೇ… ಎಂದಿದ್ದರು!

ಪರಮಶಿವ ನಡುಬೆಟ್ಟ, ಸಾಹಿತಿ

ಆಂದೋಲನ’ ಪತ್ರಿಕೆಯ ಪ್ರಾರಂಭದಲ್ಲಿ ಕರಡು ಪ್ರತಿ ತಿದ್ದುವುದು, ಅಂಚೆಗೆ ಹೋಗುವ ಪ್ರತಿಗಳಿಗೆ ವಿಳಾಸ ಬರೆಯುವುದನ್ನೂ ಮಾಡುತ್ತಿದ್ದೆ. ಹಲವು ಕಾರ್ಯಕ್ರಮಗಳಿಗೆ ಹೋದಾಗ ಅದರ ವರದಿಯನ್ನು ಬರೆದು ಕಳುಹಿಸುತ್ತಿದ್ದೆ. ವರದಿಯನ್ನು ಓದಿ ‘ನೀವು ಪತ್ರಿಕೆಯಲ್ಲಿ ಕೆಲಸ ಮಾಡಿದವರು, ಚೆನ್ನಾಗಿ ವರದಿ ಮಾಡಬಲ್ಲಿರಿ’ ಎಂದು ಬೆನ್ನು ತಟ್ಟುತ್ತಿದ್ದರು. ‘ಆಂದೋಲನ’ದಲ್ಲಿ ಪ್ರಕಟವಾಗುತ್ತಿದ್ದ ಆಡಳಿತಶಾಹಿಗಳಿಂದ ಆಗುವ ಶೋಷಣೆ, ಸಾಮಾಜಿಕ ದೌರ್ಜನ್ಯ, ಸರ್ಕಾರದ ನ್ಯೂನತೆಯ ಸತ್ಯನಿಷ್ಠ ವರದಿಗಳು ಜನಸಾಮಾನ್ಯರಿಗೆ ಮೆಚ್ಚುಗೆಯಾದವು. ಅಂದಿನಿಂದಲೂ ಕೋಟಿಯವರ ಪತ್ರಿಕೆ ರಾಜ್ಯ ಮಟ್ಟದ ಪತ್ರಿಕೆಯಷ್ಟೇ ಪ್ರಸಿದ್ಧವಾಯಿತು.
ಜಾತಿ, ಧರ್ಮದ ಬಗ್ಗೆ ಖೇದ ವ್ಯಕ್ತಪಡಿಸುತ್ತಿದ್ದ ಕೋಟಿಯವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿ, ಧರ್ಮದ ಕಾಲಮಿನ ಬಗ್ಗೆ ನೊಂದುಕೊಂಡರು. ಚಾಮುಂಡಿಬೆಟ್ಟದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ನನಗೆ ‘ಕುಸುಮ ಬಾಲೆ’ ರಂಗರೂಪಕ್ಕಿಳಿಸಲು ಹೆಗಲಾಗಿದ್ದ ಕೋಟಿ ನನ್ನ ಜೊತೆ ಅದನ್ನು ವ್ಯಕ್ತಪಡಿಸುತ್ತ, ಆ ಕಾಲಮಿನಲ್ಲಿ ಜಾತಿ, ಧರ್ಮ ‘ಮಾನವೀಯ’ ಎಂದು ಬರೆಯಲೇ ಎಂದದ್ದು ಅವರಿಗೆ ಜಾತಿ, ಧರ್ಮದಲ್ಲಿ ನಂಬಿಕೆ ಇರಲಿಲ್ಲ ಎಂಬುದನ್ನು ತೋರುತ್ತದೆ.
ಕತೆಗಾರನಾದ ನನಗೆ ನಮ್ಮ ಆಂದೋಲನ’ ಪತ್ರಿಕೆಯಲ್ಲಿ ಸಾಪ್ತಾಹಿಕ ವಿಭಾಗವನ್ನು ಏಕೆ ಆರಂಭಿಸಬಾರದು? ಆ ಮೂಲಕ ಉದಯೋನ್ಮುಖ ಬರಹಗಾರರಿಗೆ ಆಸರೆಯಾಗಬಾರದೇಕೆ ಎಂಬೆಲ್ಲ ಚಿಂತನೆಗಳು ಬಂದು, ಕೋಟಿಯವರ ಜೊತೆ ಇದನ್ನೂ ಚರ್ಚಿಸಿದೆ. ಅವರ ಬೆನ್ನಿಗಿದ್ದ ಬರಹಗಾರರ ಸಲಹೆ ಪಡೆದು ಅದನ್ನೂ ಆರಂಭಿಸಿದರು. ಇಂದು ಸಾಪ್ತಾಹಿಕ ವಿಭಾಗ ರಾಜ್ಯ ಮಟ್ಟದ ಯಾವ ಪತ್ರಿಕೆಗೂ ಕಡಿಮೆ ಇಲ್ಲದಂತೆ ಮೂಡಿಬುರುತ್ತಿರುವುದು ಹೆಮ್ಮೆಯ ಸಂಗತಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!