Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ʼಆಂದೋಲನ 50ರ ಸಾರ್ಥಕ ಪಯಣʼ ಇಂದು

ಕೋಟಿ ಅವರು ಕಂಡುಂಡ ನೋವು-ನಲಿವುಗಳು, ಸಾಧಕ-ಬಾಧಕಗಳನ್ನು ನೆನೆಯುವ, ನೆನಪಿಸುವ ಕಾರ್ಯಕ್ರಮ ಇದಾಗಿದೆ. ಕೋಟಿ ಅವರ ಒಡನಾಡಿಗಳು, ಅವರನ್ನು ಬದುಕಿನ ಭಾಗವಾಗಿಸಿಕೊಂಡವರು,ಅವರಿಂದ ಸಹಾಯ ಪಡೆದು ಬದುಕನ್ನು ರೂಪಿಸಿಕೊಂಡವರು, ʼಪತ್ರಿಕೆʼ ಯ ಓದುಗರು..

ಹೀಗೆ ಎಲ್ಲವೂ ಸೇರಿ ʼಆಂದೋಲನʼ ಮತ್ತು ಕೋಟಿ ಅವರನ್ನು ಕುರಿತು ಪುನರ್‌ ಮನನ ಮಾಡಿಕೊಳ್ಳಬಹುದಾದ ಅಪೂರ್ವ ವೇದಿಕೆ ಸಿದ್ದವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ʼಆಂದೋಲನʼ ಸಹ ಸಂಸ್ಥಾಪಕರಾದ ನಿರ್ಮಲ ಕೋಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌, ಹೆಸರಾಂತ ನಟ ಡಾ. ಶಿವರಾಜ್‌ ಕುಮಾರ್‌, ಹಿರಿಯ ಸಾಹಿತಿ ದೇವನೂರು ಮಹಾದೇವ, ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ʼಆಂದೋಲನʼ ಪತ್ರಿಕೆಯ ಸಂಪಾದಕ ರವಿ ಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಭಾಗಿಯಾಗಲಿದ್ದಾರೆ.

1972 ರಲ್ಲಿ ಪ್ರಾರಂಭವಾದ ʼಪತ್ರಿಕೆʼ ತನ್ನ 50 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಇಂದು ಸಂಜೆ 4 ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ʼಆಂದೋಲನ-50 ಸಾರ್ಥಕ ಪಯಣʼ ಕಾರ್ಯಕ್ರಮ ಆಯೋಜನೆಯಾಗಿದೆ.

ಗಣ್ಯರ ಸ್ವಾಗತಕ್ಕೆ ಸಕಲ ಸಿದ್ಧತೆ

ಘಟಿಕೋತ್ಸವ ಭವನದ ದ್ವಾರದಲ್ಲಿ ಸ್ಥಾಪಿಸಿರುವ ʼʼಆಂದೋಲನ ಡಿಜಿಟಲ್‌ʼ ಕಿಯೋಸ್ಕ್‌ ನಲ್ಲಿ ಮೈಸೂರು,ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳು ಸೇರಿ ರಾಜ್ಯದೆಲ್ಲೆಡೆಯಿಂದ ಆಗಮಿಸಲಿರುವ ಗಣ್ಯ ಮಾನ್ಯರು ʼಪತ್ರಿಕೆʼ ನಡೆದು ಬಂದ ಹಾದಿ ಬಗ್ಗೆ ಚುಟುಕು ಅನಿಸಿಕೆ ವ್ಯಕ್ತಪಡಿಸಲಿದ್ದಾರೆ. ಇವರ ನುಡಿಗಳು ʼಆಂದೋಲನ ಟಿವಿʼ ಡಿಜಿಟಲ್‌ ವೇದಿಕೆಯಲ್ಲಿ ಪ್ರಸಾರವಾಗಲಿದೆ. ನೂತನ ʼಆಂದೋಲನʼ ವೆಬ್‌ಸೈಟ್‌ ಅನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅನಾವರಣಗೊಳಿಸಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ