Mysore
25
overcast clouds
Light
Dark

ಆಂದೋಲನ 50 ಸಾರ್ಥಕ ಪಯಣಕ್ಕೆ ನಾಳೆ ಸಿಎಂ ಬೊಮ್ಮಾಯಿ ಅವರಿಂದ ಅಧಿಕೃತ ಚಾಲನೆ..

ಮೈಸೂರು : ನಾಳೆ ಆಂದೋಲನ ದಿನ ಪತ್ರಿಕೆಗೆ 50 ರ ತುಂಬು ಸಂಭ್ರಮ. ಈ ಹಿನ್ನೆಲೆಯಲ್ಲಿ ನಾಳೆ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿರುವ ಘಟಿಕೋತ್ಸವ ಭವನದಲ್ಲಿ 50 ನೇ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಹಿರಿಯ ಸಾಹಿತಿ ದೇವನೂರು ಮಹಾದೇವ, ಆಂದೋಲನ ಪತ್ರಿಕೆಯ ಸಹ ಸಂಸ್ಥಾಪಕರಾದ ನಿರ್ಮಲ ಕೋಟಿ, ಮಾಜಿ ಮುಖ್ಯಮಂತ್ರಿಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ, ಹೆಚ್‌.ಡಿ.ಕುಮಾರಸ್ವಾಮಿ,  ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್‌, ಖ್ಯಾತ ನಟ ಶಿವರಾಜ್‌ ಕುಮಾರ್‌, ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಗಣ್ಯರು ವೇದಿಕೆಯನ್ನು ಅಲಂಕರಿಸುತ್ತಿದ್ದಾರೆ. 

ಆಂದೋಲನ ದಿನ ಪತ್ರಿಕೆ 

ಆಂದೋಲನ ಎಂಬುದು ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ಸಂದರ್ಭವಾಗಿದೆ. 1972 ರಲ್ಲಿ ಪ್ರಾರಂಭವಾದ ಆಂದೋಲನ ಪತ್ರಿಕೆಯು ಸಮಾಜಮುಖಿ ಚಿಂತನೆ ಹಾಗೂ ವಿಚಾರಗಳನ್ನು ಓದುಗರಿಗೆ ನೀಡುತ್ತಾ. ಓದುಗರ ಮನದಾಳದಲ್ಲಿ ತನ್ನದೇ ಸ್ಥಾನವನ್ನು  ಗಿಟ್ಟಿಸಿಕೊಂಡಿದೆ. ಈ ಪತ್ರಿಕೆಗೀಗ 50 ರ ಸಂಭ್ರಮ ಮೈಸೂರು ಭಾಗದ ಜನರ ಆಶೋತ್ತರಗಳ ಪ್ರತಿಬಿಂಬವಾಗಿ ರೂಪುಗೊಂಡ ಈ ಪತ್ರಿಕೆ  ಜನಜೀವನದಲ್ಲಿ ಹಾಸುಹೊಕ್ಕಾಗಿ ಅಳಿಸಲಾಗದ ಛಾಪು ಮೂಡಿಸುತ್ತಾ ಇಂದು ಆಂದೋಲನ ಪತ್ರಿಕೆಯು ಒಂದು ಸಂಘಟಿತ ಶಕ್ತಿಯಾಗಿ ಬೆಳೆದಿದೆ. ಇದಕ್ಕೆ ಮೂಲ ಕಾರಣ ಓದುಗರೇ ಆಗಿದ್ದಾರೆ. ಪತ್ರಿಕೆಗಳನ್ನು ಕೊಂಡು, ಓದಿ ಬೆಳೆಸುತ್ತಿದ್ದಾರೆ ಸಾಕಷ್ಟು ಓದುಗರು.

ಪತ್ರಿಕೆಯು 50 ವರ್ಷಗಳನ್ನು  ಪೂರೈಸುತ್ತಿರುವ ಈ ಸಂದರ್ಭವನ್ನು ದಾಖಲಿಸುವ ಸಲುವಾಗಿ ನಾಳೆ ಜುಲೈ 6 ನೇ ತಾರೀಖಿನಂದು ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಂದೋಲನ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಅಂಕಣಗಳ ಸಂಗ್ರಹವನ್ನು ಹೊತ್ತ  ʼಇದ್ದದ್ದು ಇದ್ದಾಂಗ” ಎಂಬ ಪುಸ್ತಕವನ್ನು  ಹೊರತರಲಾಗುತ್ತಿದೆ. ಇದರ ಜೊತೆಗೆ  ʼಆಂದೋಲನ” ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡುವ ಮೂಲಕ ಈ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದಿದ್ದೇವೆ. ಬನ್ನಿ ಈ ಪತ್ರಿಕೆಯ ಸಾರ್ಥಕ ಪಯಣದಲ್ಲಿ ಎಲ್ಲರೂ ಜೊತೆಯಾಗಿ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ