Mysore
31
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧವಾದ ಆಂದೋಲನ ; ಭಾಗ-3

ಬದನವಾಳು ದುರಂತ: ವೃತ್ತಿ ಧರ್ಮಕ್ಕೆ ಚ್ಯುತಿ ತಾರದ ‘ಆಂದೋಲನ’

-ಶ್ರೀಧರ್ ಆರ್ ಭಟ್ಟ

ಗಾಂಧೀಜಿ ಭೇಟಿ ನೀಡಿದ್ದ ಬದನವಾಳು ಗ್ರಾಮದಲ್ಲಿ ನಡೆದ ದುರಂತದ ಕಪ್ಪುಚುಕ್ಕಿ ಈಗ ಇತಿಹಾಸದ ಪುಟದಲ್ಲಿ ಸೇರಿ ಹೋಗಿದೆ. ಅದಾಗಿ ಈಗಾಗಲೇ ೨೯ ವರ್ಷಗಳೇ ಗತಿಸಿ ಹೋಗಿವೆ. ೧೯೯೩ರ ಆರಂಭದಲ್ಲೇ ಇಲ್ಲೊಂದು ಅಮಾನವೀಯ ಘಟನೆ ನಡೆದು ಕಡು ದ್ವೇಷ, ಅಸೂೆುಂಗಳ ಗೂಡಾಗಿ ದುರಂತಕ್ಕೆ ಕಾರಣವಾಗಿ ಹೋಯಿತು.

೧೯೯೩ರ ಜನವರಿಯಲ್ಲಿ ಆರಂಭವಾದ ಈ ದುರಂತದ ವಿವರಗಳನ್ನು ನಿರ್ಭೀತವಾಗಿ ಪ್ರಕಟಿಸಿದ ಏಕೈಕ ದಿನಪತ್ರಿಕೆ ‘ಆಂದೋಲನ’ ಎಂದರೆ ತಪ್ಪಾಗಲಾರದು.

‘ಆಂದೋಲನ’ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರು ಸತ್ಯಸಂಗತಿಯ ವರದಿಗಳನ್ನು ಯಾವುದೇ ಮುಲಾಜಿಲ್ಲದೆ ಪ್ರಕಟಿಸುವ ಮೂಲಕ ‘ನಾನಿದ್ದೇನೆ’ ಎಂಬ ಸ್ಪಷ್ಟ ಸಂದೇಶವೂ ರವಾನಿಸಿದಂತೆ ಕೆಲಸ ನಡೆದಿತ್ತು. ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯದ ಪ್ರವೇಶವೇ ಈ ದುರಂತಕ್ಕೆ ಮೂಲವಾಗಿತ್ತು.ಬೂದಿ ಮುಚ್ಚಿದ ಕೆಂಡವಾಗಿದ್ದ ಪರಸ್ಪರರ ಅನುಮಾನದ ಹುತ್ತ ಒಡೆಯಲು ದೇವಾಲಯದ ಪ್ರವೇಶ ನೆಪವಾಯಿತು.

ಜನವರಿ ೩೦, ೧೯೯೩ ರಂದು ನಿಗದಿಯಾಗಿದ್ದ ಈ ದೇವಾಲಯದ ಉದ್ಘಾಟನಾ ಸಮಾರಂಭದಿಂದ ಆರಂಭವಾದ ‘ಆಂದೋಲನ’ ಬದನವಾಳಿನ ವರದಿ ಮಾರ್ಚ್ ೨೫, ೧೯೯೩ರಂದು ನಡೆದ ದಲಿತರ ಹತ್ಯೆ, ನಂತರ ನಡೆದ ಪರ ವಿರೋಧ ಮೆರವಣಿಗೆ, ಏಪ್ರಿಲ್ ೨೬ ರಂದು ನಡೆದ ಗೋಲಿಬಾರ್ ಹಾಗೂ ಅದರ ದಳ್ಳುರಿಯ ಸುದ್ದಿ ..ಇದೆಲ್ಲವನ್ನೂ ಸವಿವರವಾಗಿ ವರದಿ ಮಾಡಿದ್ದ ‘ಆಂದೋಲನ’ ಪತ್ರಿಕಾ ಧರ್ಮದ ಇತಿ ಮಿತಿಯಲ್ಲಿ ಸಮಾಜದ ಸೇತುವಾಗಿಯೂ ಕೆಲಸ ಮಾಡಿತು. ತನ್ನ ನಿಷ್ಠುರ ವರದಿಗಳಿಂದಾಗಿ ಪತ್ರಿಕೆ ಪರ-ವಿರೋಧಿಗಳ ಹೊಗಳಿಕೆ, ತೆಗಳಿಕೆಗಳನ್ನೂ ಅಂದು ಎದುರಿಸಬೇಕಾಯಿತು.
ಆದರೂ ಅಂದಿನ ‘ಆಂದೋಲನ’ ಸಂಪಾದಕ ಮಂಡಳಿ ಎದೆಗುಂದದೆ ಈ ವಿಷಯವನ್ನು ನಿರ್ಭೀತಿಯಿಂದ ವರದಿ ಮಾಡಿ ಈ ಭಾಗದ ಜನಸಾಮಾನ್ಯರ ಪ್ರೀತಿ ಮತ್ತು ಅಭಿಮಾನಕ್ಕೆ ‘ಪತ್ರಿಕೆ’ ಕಾರಣವಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ