ಮೈಸೂರು: ರಾಜಶೇಖರ ಕೋಟಿ ರವರು ಮೈಸೂರಿನಲ್ಲಿ ಈ ಆಂದೋಲನ ದಿನಪತ್ರಿಕೆಯನ್ನು ಆರಂಭಿಸಿದ ಸಂದರ್ಭದಲ್ಲಿ ನಾನು ಸಹ ಅವರ ಅಭಿಮಾನಿಯಾಗಿದ್ದೆ. ಪತ್ರಿಕೆಯನ್ನು ನಡೆಸಲು ಅವರು ಪಟ್ಟ ಶ್ರಮವನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರೊಂದಿಗೆ ನಾನು ಸಹ ಭಾಗಿಯಾಗಿದ್ದೇನೆ. ಇಂದು ಅವರ ಶ್ರಮ ಅವರ ಏಳು-ಬೀಳಿನ ಪ್ರತಿಫಲ ಇಂದು ೫೦ ವರ್ಷವನ್ನು ಪೂರೈಸಿದೆ. ಈ ಪತ್ರಿಕೆಯ ಕೀರ್ತಿ ಇನ್ನೂ ಹೆಚ್ಚಾಗಲಿ ಎಂದು ಆಶಿಸುತ್ತೇನೆ.
-ಕಾಗಲವಾಡಿ ಎಂ.ಶಿವಣ್ಣ, ಮಾಜಿ ಸಂಸದರು