ಬೆಂಗಳೂರು : ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ಕೃಷಿ ವಿಶ್ವವಿದ್ಯಾಲಯಗಳು ಹೊಸ ಹೊಸ ಸಂಶೋಧನೆಗಳ ಮೂಲಕ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅರಮನೆ ಮೈದಾನದಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಬದಲಾವಣೆಗೆ ಭಾರತವನ್ನು ಸನ್ನದ್ದುಗೊಳಿಸುವ ನಿಟ್ಟಿನಲ್ಲಿ ಕೃಷಿ ವಿವಿಗಳ ಪಾತ್ರ ದೊಡ್ಡದಿದೆ. ಹಳೆಯ ಸಂಶೋಧನಾ ಮಾದರಿಯನ್ನು ಬಿಟ್ಟು ಅತಿಯಾದ ನೀರಿನ ಬಳಕೆ, ಹವಾಮಾನ ವೈಪರೀತ್ಯ, ರಾಸಾಯಾನಿಕ ಬಳಕೆಯ ದುಷ್ಪರಿಣಾಮ ಮೊದಲಾದ ವಿಚಾರಗಳು ಹಾಗೂ ಸವಾಲುಗಳ ಬಗ್ಗೆ ರೈತರ ಹೊಲವನ್ನೇ ಕ್ಯಾಂಪಸ್‍ನ್ನಾಗಿ ಮಾಡಿಕೊಂಡು ಸಂಶೋಧನೆ ನಡೆಸಬೇಕು ಎಂದರು.
ಒಳ್ಳೆಯ ಬೀಜ, ಸರಿಯಾದ ಔಷ ಹಾಗೂ ಸೂಕ್ತ ವಿಧಾನವನ್ನು ರೈತರಿಗೆ ಒದಗಿಸಿದಾಗ ಅವರ ಅನಿಶ್ಚಿತತೆ ದೂರವಾಗುತ್ತದೆ ಎಂದು ಹೇಳಿದರು.ವಿದೇಶದಲ್ಲಿ ಮುಂದಿನ ಋತುಮಾನದಲ್ಲಿ ಎಷ್ಟು ಮಳೆ, ಎಷ್ಟು ಬಿತ್ತನೆ, ಎಷ್ಟು ಉತ್ಪಾದನೆ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆಯನ್ನು ಆಧರಿಸಿ ಬೆಲೆ ನಿಗದಿ ಮಾಡುವ ಔಟ್‍ಲುಕ್ ತಯಾರಿಸುತ್ತಾರೆ. ಅದೇ ರೀತಿ ನಮ್ಮ ಕೃಷಿ ಬೆಲೆ ಆಯೋಗವು ಬೆಳೆಯುವ ಬೆಳೆಯುವ ಕರ್ಚಿನ ಆಧಾರದ ಮೇಲೆ ವೈಜ್ಞಾನಿಕವಾಗಿ ಔಟ್‍ಲುಕ್ ರಿಪೋರ್ಟ್‍ನ್ನು ಸಿದ್ದಪಡಿಸಬೇಕು ಎಂದರು.
ಗ್ರಾಮೀಣ ಹಣಕಾಸು ವ್ಯವಸ್ಥೆ ಬದಲಾಗಬೇಕಿದೆ. ಕೇಂದ್ರ ಕೃಷಿ ಹಾಗೂ ಹಣಕಾಸು ಸಚಿವರಿಗೆ ಗ್ರಾಮೀಣ ಸಾಲದ ಪ್ರಮಾಣವನ್ನು ಹೆಚ್ಚಿಸುವಂತೆ ಒತ್ತಾಯ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದೆ ಇನ್ನು 10 ದಿನದಲ್ಲಿ ರೈತ ಶಕ್ತಿಯೋಜನೆಯನ್ನು ಪ್ರಾರಂಭಿಸಲಾಗುವುದು. 11 ಲಕ್ಷ ರೈತ ಮಕ್ಕಳು ವಿದ್ಯಾನಿ ಯೋಜನೆ ಪ್ರಯೋಜನ ಪಡೆದಿದ್ದಾರೆ. ನಾನು ಕಳೆದ 30 ವರ್ಷಗಳಿಂದಲೂ ಸಿರಿಧಾನ್ಯದ ಊಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಸಿರಿಧಾನ್ಯ ಪೋಷ್ಟಿಕಾಂಶದಿಂದ ಕೂಡಿದೆ. ಆರೋಗ್ಯಯುತವಾದದ್ದು ಅದಕ್ಕೆ ಹೆಚ್ಚಿನ ಪೆÇ್ರೀತ್ಸಾಹ ಕೊಡುತ್ತಿದ್ದೇವೆ. ಎರಡು ಮೂರು ವರ್ಷಗಳಿಂದ ಪಡಿತರ ವ್ಯವಸ್ಥೆಯಲ್ಲಿ ರಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಬಡವರ ಆಹಾರವಾಗಿದ್ದ ಸಿರಿಧಾನ್ಯವು ಇಂದು ಶ್ರೀಮಂತರ ಆಹಾರವಾಗಿದೆ. ರೋಗನಿರೋಧಕ ಶಕ್ತಿ ಹೊಂದಿದೆ. ಸಿರಿಧಾನ್ಯಗಳಿಗೆ 10 ಹೆಕ್ಟೇರ್‍ಗೆ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಕೈಲಾಸ್ ಚೌಧರಿ, ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯರಾದ ಆ.ದೇವೇಗೌಡ, ಟಿ.ಎ.ಶರವಣ, ಛಲವಾದಿ ನಾರಾಯಣಸ್ವಾಮಿ, ಕೃಷಿ ಇಲಾಖೆ ಕಾರ್ಯದರ್ಶಿ ಕಳಸ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.