Mysore
21
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಮಹರ್ಷಿ ವಾಲ್ಮೀಕಿ ಸಾಧನೆ ಎಲ್ಲರಿಗೂ ಪ್ರೇರಣೆ – ಎಂ ಕೆ ಸೋಮಶೇಖರ್.

ಮೈಸೂರು : ಬೆಸ್ತರ ಬ್ಲಾಕ್ ವಿದ್ಯಾರಣ್ಯಪುರಂ ಇವರ ಆಶ್ರಯದಲ್ಲಿ ಮೈಸೂರು ನಗರದ ಕಂಸಾಳೆ ಮಹದೇವಯ್ಯ ವೃತ್ತದಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿಯನ್ನು ಆಚರಿಸಲಾಯಿತು.ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ವೇಳೆ ಕುಮಾರ್ ನಾಯಕ್,ಮೂರ್ತಿ,ಚಪಾತಿ ಮಹದೇವಸ್ವಾಮಿ,ಮೋಹನ್,ಯುವ ಕಾಂಗ್ರೆಸ್ ಮುಖಂಡರಾದ ಚಂದನ್ ವಿಜಯ್ ಕುಮಾರ್,ಚಂದು,ಗುಂಡಾ,ನಂದನ್ ನಾಯಕ್,ಕಿರಣ್,ಪ್ರಶಾಂತ್,ಜಗನ್ನಾಥ್,ಐಟಿ ಸೆಲ್ ಅಧ್ಯಕ್ಷ ನಿರಾಲ್ ಶಾ ಮತ್ತಿತರರು ಉಪಸ್ಥಿತರಿದ್ದರು.ನಂತರ ಸಾರ್ವಜನಿಕರಿಗೆ ಸಿಹಿ ವಿರಿಸಲಾಯಿತು.
ನಂತರ ಮಾತನಾಡಿದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಬೇಡನಾಗಿದ್ದ ವ್ಯಕ್ತಿ ಸತತ ಪರಿಶ್ರಮ ಹಾಗೂ ಅಚಲ ಸಾಧನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡು ಪ್ರತಿಯೊಬ್ಬರಿಗೂ ಪ್ರೇರಣೆಯಾದರು ಎಂದು ತಿಳಿಸಿದರು.ಸತತ ಪರಿಶ್ರಮದಿಂದ ಮಹಾನ್ ಸಾಧನೆ ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಮಹಾರಾಜರು ಸಾಕ್ಷಿಯಾಗಿದ್ದಾರೆ.ವಾಲ್ಮೀಕಿಯವರು ಚಿಂತಕರು,ತತ್ವಜ್ಞಾನಿಗಳು,ಶಿಕ್ಷಣ ಪ್ರೇಮಿಯಾಗಿದ್ದರು.ರಾಮಾಯಣವನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದರು.ರಾಮಾಯಣದಲ್ಲಿನ ಪ್ರಕೃತಿ ಸೌಂದರ್ಯ,ಆದರ್ಶ ವ್ಯಕ್ತಿಯ ಚಿತ್ರಣ,ಕೌಟುಂಬಿಕ ಮೌಲ್ಯಗಳು,ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯಗಳು,ಸಾರ್ವಕಾಲಿಕ ಸತ್ಯ ಎಂದರು.ವ್ಯಕ್ತಿ ನಕರಾತ್ಮಕ ಭಾವನೆಗಳನ್ನು ತೊಡೆದು ಆತ್ಮ ವಿಶ್ವಾಸದಿಂದ ಮುನ್ನೆಡೆದರೆ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ವಾಲ್ಮೀಕಿಯವರ ಜೀವನ ಚರಿತ್ರೆಯೇ ಸಾಕ್ಷಿಯಾಗಿದೆ ಎಂದು ನೆನೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!