Mysore
27
overcast clouds

Social Media

ಶನಿವಾರ, 13 ಜೂನ್ 2026
Light
Dark

ಧರಣಿಗೆ ಕುಳಿತಿದ್ದ ಕೋವಿಡ್ ವಾರಿಯರ್ಸ್ ಮುಂದೆ ಅಧಿಕಾರಿಯ ದರ್ಪ

ಚಾಮರಾಜನಗರ:ಕಳೆದ ೨ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೋವಿಡ್ ಮುಂಚೂಣಿ ಕಾರ್ಯಕರ್ತರ ಬಳಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮೊಹಮ್ಮದ್ ಅಕ್ಬರ್ ಅವರು ದರ್ಪ ತೋರಿದ ಘಟನೆ ನಡೆದಿದೆ.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ವಿವಿಧ ಬೇಡಿಕೆಗೆ ಒತ್ತಾಯಿಸಿ ಕೋವಿಡ್ ಮುಂಚೂಣಿ ಕಾರ್ಯಕರ್ತರು ೨ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಪ್ರತಿಭಟನಕಾರರ ಜೊತೆ ಮಾತನಾಡುವ ಭರದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮೊಹಮ್ಮದ್ ಅಕ್ಬರ್ ಅವರು ಅವಾಚ್ಯ ಸನ್ನೆಗಳಿಂದ ಹಾಗೂ ದರ್ಪದಿಂದ ಮಾತನಾಡಿದ್ದು ಕೆಲವು ಸಮಯ ಧರಣಿ ನಿರತರು ಹಾಗೂ ಅಧಿಕಾರಿಯ ವಿರುದ್ಧ ವಾಗ್ವಾದಕ್ಕೆ ಕಾರಣವಾಯಿತು.

ಧರಣಿ ನಿರತ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಅಧಿಕಾರಿ ಮೊಹಮ್ಮದ್ ಅಕ್ಬರ್ ನಡುವೆ ಕೆಲಕಾಲ ಮಾತಿನ ಚಕಾಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಪೋಲೀಸರ ಮಧ್ಯೆ ಪ್ರವೇಶಿಸಿದಿಂದ ತಣ್ಣಗಾಯಿತು. ಅಧಿಕಾರಿಯ ನಡೆಗೆ ಬೇಸತ್ತ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್ ಅವರನ್ನು ಭೇಟಿ ಮಾಡಿ ಅಧಿಕಾರಿಯ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!