Mysore
21
broken clouds

Social Media

ಬುಧವಾರ, 24 ಜೂನ್ 2026
Light
Dark

ಮುರುಘಾ ಶ್ರೀ ಬಂಧನ – ಇನ್ನಷ್ಟು ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕಿದೆ : ಸ್ಟ್ಯಾನ್ಲಿ

ಮೈಸೂರು: ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಗ ಶರಣರನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಅವರು ಮಾತನಾಡಿದ್ದಾರೆ.

ಇದು ಎರಡು ಜನ ಮಕ್ಕಳದ್ದು ಸಮಸ್ಯೆ ಅಲ್ಲ 12 ವರ್ಷಗಳ ಹಿಂದೆಯೇ ದೊಡ್ಡ ಪತ್ರಕರ್ತರು ಈ ಶರಣರ ಬಗ್ಗೆ ಬರೆಯುತ್ತಾರೆ. ಮಠದಲ್ಲೇ ವಾತಾವರಣದಲ್ಲಿ ಪತ್ರಿಕೆ ನಡೆಸುವಂತಹ ಕರೆದ ಪತ್ರಕರ್ತರ ನಮಗೆ ತಿಳಿಸಿದ್ದಾರೆ. ರಾತ್ರಿಯಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸುತ್ತಿದ್ದನ್ನು ನೋಡಿದ್ದೇವೆ ಅಂತ ಬರೆದಿದ್ದಾರೆ. ಶರಣರೆ ಮಾನ ನಷ್ಟ ಮೊಕದ್ದಮೆ ಹೂಡುತ್ತಾರೆ.  ನ್ಯಾಯಾಧೀಶರು ಕರೆದರೂ ಶರಣರು ಹೋಗುವುದಿಲ್ಲ. ಹೈಕೋರ್ಟಿನಲ್ಲಿ ಕೇಸು ಖುಲಾಸೆ ಆಗುತ್ತದೆ. 12 ವರ್ಷದಿಂದ ಎಷ್ಟು ನಡೆದಿರಬಹುದು, ಅದಕ್ಕಿಂತಲೂ ಎಷ್ಟು ನಡೆದಿರಬಹುದು. ಕಣ್ಣೀರು ಹಾಕಿದವರಿಗೆ ನ್ಯಾಯ ಸಿಗಬೇಕು. ಸಮುದ್ರದ ಮಂಜುಗಡ್ಡೆ ತೇಲುವುದರ ತನಿಖೆ ಆಗಬೇಕು. ಇದು ಜನರ ಕ್ಷಿಪ್ರ ಹೋರಾಟಕ್ಕೆ ಸಿಕ್ಕ ಜಯ. ಇದು ಇಬ್ಬರು ಹೆಣ್ಣು ಮಕ್ಕಳಿಗೆ ಸಿಕ್ಕ ಸಾಂತ್ವಾನ ಅಲ್ಲ, ಇನ್ನಷ್ಟು ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕಿದೆ ಎಂದು ಸ್ಟ್ಯಾನ್ಲಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!