ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ, ನಂಜನಗೂಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ದರ್ಶನ್ ಧ್ರುವನಾರಾಯಣರ ಸರಳ ‘ಮಂತ್ರ ಮಾಂಗಲ್ಯ’ ಮದುವೆ ಸುದ್ದಿಯಾಗಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ರವಾನಿಸಿದೆ.
ರಾಷ್ಟ್ರಕವಿ ಕುವೆಂಪು ಅವರು ರೂಪಿಸಿದ ಯಾವುದೇ ಆಡಂಬರ ಸಂಪ್ರದಾಯವಿಲ್ಲದ ಸರಳ ಹಾಗೂ ವಿಧಿ-ಮುಕ್ತ ವಿವಾಹ ಸಂಹಿತೆಯಾದ ಮಂತ್ರ ಮಾಂಗಲ್ಯದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವ ಮೂಲಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅದೂ ಸಂವಿಧಾನ ದಿನಾಚರಣೆಯಂದೇ ಈ ಆದರ್ಶ ವಿವಾಹ ನಡೆದಿರುವುದು ವಿಶೇಷ.
ಯಾವುದೇ ಆಡಂಬರ,ವೈಭವ ಇಲ್ಲದೆ ಪರಸ್ಪರ ಅರ್ಥೈಸಿಕೊಂಡು ಸಹನೆ ಸಹಬಾಳ್ವೆಗೆ ಒತ್ತು ಕೊಟ್ಟು ಮಾಡಿಕೊಳ್ಳುವ ಸರಳ ವಿವಾಹವೇ ಸಾಮಾಜಿಕ ಪರಿವರ್ತನೆಗೆ ನಾಂದಿ ಎಂದು ಪ್ರತಿಪಾದಿಸಿದವರು ಮಹಾಕವಿ ಕುವೆಂಪು. ಅವರ ದೂರದೃಷ್ಟಿತ್ವದ ಮಹತ್ವವನ್ನು ಅರಿತು ಸರಳ ವಿವಾಹಗಳು ಆದ್ಯತೆ ಮೇರೆಗೆ ಇನ್ನಷ್ಟು ಎಡೆ ನಡೆಯಲಿ. ಯೋಗ್ಯ ಜನಪ್ರತಿನಿಧಿಯಾಗಿ ತಮ್ಮ ಸಾಮಾಜಿಕ ಜವಾಬ್ದಾರಿ ಬದ್ಧತೆ ಜೊತೆಗೆ ವೈಯಕ್ತಿಕ ಜೀವನವನ್ನು ಮಾದರಿಯಾಗಿ ಮೇಲ್ಪಂಕ್ತಿ ಹಾಕಿಕೊಟ್ಟ ದರ್ಶನ್ ಧ್ರುವನಾರಾಯಣರವರ ನಡೆ ಶ್ಲಾಘನೀಯ ಹಾಗೂ ಅನುಕರಣೀಯ.
-ಅನಿಲ್ ಕುಮಾರ್, ನಂಜನಗೂಡು



