ರಾಜ್ಯದ ಪ್ರಮುಖ ೧೪ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ೧೩೫ ಟಿಎಂಸಿ ನೀರಿನ ಕೊರತೆಯಿದ್ದು, ಕೇವಲ ೬೫ ಟಿಎಂಸಿ ನೀರು ಮಾತ್ರ ಸಂಗ್ರಹವಾಗಿರುವುದು ಆತಂಕಕಾರಿ.
ತುಂಗಭದ್ರಾ ಜಲಾಶಯದಲ್ಲಿ ೨೬ ಟಿಎಂಸಿ, ಆಲ ಮಟ್ಟಿಯಲ್ಲಿ ೭.೫ ಟಿಎಂಸಿ ಹಾಗೂ ನಾರಾಯಣಪುರದಲ್ಲಿ ೪.೯ ಟಿಎಂಸಿ ಹೂಳು ತುಂಬಿಕೊಂಡಿರುವುದ ರಿಂದ ಅಮೂಲ್ಯ ಮಳೆನೀರು ಸಂಗ್ರಹವಾಗದೆ ವ್ಯರ್ಥವಾಗುತ್ತಿದೆ ಎಂದು ವರದಿಗಳು ಹೇಳುತ್ತವೆ.
ಬೆಂಗಳೂರಿಗೆ ವಾರ್ಷಿಕ ೨೨ ಟಿಎಂಸಿ ನೀರು ಅಗತ್ಯವಿದ್ದು, ಹೂಳಿನ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಬೇಸಿಗೆಯಲ್ಲಿ ತೀವ್ರ ಜಲಕ್ಷಾಮ ಎದುರಾಗುವುದು ಖಚಿತ. ಹೂಳೆತ್ತುವ ಕುರಿತು ತಾಂತ್ರಿಕ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ವರದಿಗಾಗಿ ಕಾಯುತ್ತಾ ಕಾಲಹರಣ ಮಾಡದೆ ತೆಲಂಗಾಣ ಮತ್ತು ಗುಜರಾತ್ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹೂಳು ತೆರವುಗೊಳಿಸಬೇಕು. ಜಲಸಂಪನ್ಮೂಲ ಉಳಿಸಲು ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಲಿ.
-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು




