Mysore
26
scattered clouds

Social Media

ಶನಿವಾರ, 28 ನವೆಂಬರ್ 2026
Light
Dark

ಓದುಗರ ಪತ್ರ: ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿ

ಸರಗೂರು ತಾಲ್ಲೂಕು ಕಚೇರಿಗೆ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಜನರು ಬರುತ್ತಾರೆ. ಅವರಲ್ಲಿ ಹಿರಿಯರು, ಹೆಂಗಸರು, ವಿದ್ಯಾರ್ಥಿಗಳೂ ಇರುತ್ತಾರೆ.

ಜಾತಿ ದೃಢೀಕರಣ ಪತ್ರ, ವಿಧವಾ ಪಿಂಚಣಿ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ ವಿಷಯಕ್ಕೆ ಬರುವವರು ಒಂದು ಕಡೆಯಾದರೆ, ಜಮೀನಿನ ವ್ಯವಹಾರ ಹಾಗೂ ಇತರೆ ಕಾರ್ಯಗಳಿಗೆ ಬರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಜನಸಾಂದ್ರತೆ ಇರುವ ಕಡೆ ಕನಿಷ್ಠ ಶೌಚಾಲಯ ವ್ಯವಸ್ಥೆ ಇರಬೇಕಾಗುತ್ತದೆ.

ಆದರೆ ಇಲ್ಲಿ ಅದು ಇಲ್ಲ. ಮೂತ್ರವಿಸರ್ಜನೆಗೆ ತುರ್ತು ಕರೆ ಬಂದವರು ಪಕ್ಕದಲ್ಲಿ ಇರುವ ಗಿಡ ಗಂಟಿಗಳ ಪೊದೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ೪೦೦ ರಿಂದ ೫೦೦ ಮೀಟರ್ ದೂರದಲ್ಲಿರುವ ಕೆಎಸ್‌ಆರ್ಟಿ ಸಿ ಬಸ್ಸು ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕು ಕಚೇರಿಯ ಸೂಕ್ತ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡುವತ್ತ ಗಮನಹರಿಸಬೇಕು. ಮೊದಲು ಜನಪ್ರತಿನಿಧಿಗಳು ಈ ಕಾರ್ಯ ಚುರುಕಾಗುವಂತೆ ನೋಡಿಕೊಂಡು ಮತದಾರ ಪ್ರಭುಗಳ ಮನ ಗೆಲ್ಲುವತ್ತ ಮನಸ್ಸು ಮಾಡಬೇಕಾಗಿದೆ.

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!