Mysore
27
broken clouds

Social Media

ಗುರುವಾರ, 26 ನವೆಂಬರ್ 2026
Light
Dark

ಓದುಗರ ಪತ್ರ: ಮಾಡುವ ಕೆಲಸ ನೋಡಿ ‘ಕೂಲಿ’ ಹೆಚ್ಚಿಸಿ

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಆಧಾರಸ್ತಂಭವಾಗಿದ್ದು, ಗ್ರಾಮೀಣ ಭಾಗದ ಬಡಜನತೆಯ ಮನೆ ಮನೆಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಲ್ಲಿ, ಇವರ ಪಾತ್ರ ದೊಡ್ಡದು. ಹಲವಾರು ವರ್ಷಗಳಿಂದ ತಾಯಿ ಹಾಗೂ ಶಿಶುಗಳ ಮರಣ ಪ್ರಮಾಣ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳು ಕಡಿಮೆ ಆಗಲು ಆಶಾ ಕಾರ್ಯಕರ್ತೆಯರು ಸಾಮಾನ್ಯ ಜನತೆಗೆ ಜಾಗೃತಿಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಕೊರೋನಾ ಸಂದರ್ಭದಲ್ಲಿ ಇವರುಗಳು ನೀಡಿದ ಸೇವೆ ಅನನ್ಯವಾದರೂ ಸರ್ಕಾರಗಳು ಇವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿರುವುದು ವಿಪರ್ಯಾಸವೇ ಸರಿ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಈ ಹೋರಾಟ ಹಮ್ಮಿಕೊಂಡಿರುವುದು ಸರಿಯಾದ ನಿರ್ಧಾರ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಚಾರದ ಮಾತುಗಳನ್ನಾಡುವುದನ್ನು ಬಿಟ್ಟು ಆಶಾ ಸಹೋದರಿಯರ ಬೇಡಿಕೆಗಳತ್ತ ಗಮನಹರಿಸುವುದು ಒಳಿತು.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!