Mysore
27
scattered clouds

Social Media

ಗುರುವಾರ, 26 ನವೆಂಬರ್ 2026
Light
Dark

ಕೋಟೆಯಲ್ಲಿ ಪ.ಜಾತಿಗೆ ಏಕೈಕ ಜಿಪಂ ಕ್ಷೇತ್ರ ಮೀಸಲು!

ಮಂಜುಕೋಟೆ

ದಲಿತ ಸಮುದಾಯದ ಆಕಾಂಕ್ಷಿಗಳಲ್ಲಿ ಅಸಮಾಧಾನ; ಬಿಸಿಎಂ ಎ ವರ್ಗದಲ್ಲಿ ಸಂತಸ

ಎಚ್.ಡಿ. ಕೋಟೆ: ತಾಲ್ಲೂಕಿನ ಇತಿಹಾಸದಲ್ಲೇ ಪರಿಶಿಷ್ಟ ಜಾತಿಗೆ ಏಕೈಕ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮೀಸಲಾಗಿರುವುದು ಹಾಗೂ ಮುಳ್ಳೂರು ಜಿಪಂ ಕ್ಷೇತ್ರದ ಮೀಸಲಾತಿ ಬದಲಾವಣೆಯಿಂದ ದಲಿತ ಸಮುದಾಯದಲ್ಲಿ ಅಸಮಾಧಾನ ಮೂಡಿದ್ದರೆ, ಇತ್ತ ಬಿಸಿಎಂ ಎ ಸಮುದಾಯದವರಲ್ಲಿ ಸಂತಸ ಉಂಟಾಗಿದೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಒಂದೇ ಒಂದು ಜಿಪಂ ಕ್ಷೇತ್ರ ಮೀಸಲು ನಿಗದಿಯಾಗಿ ರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಮುಳ್ಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಬಿಸಿಎಂ ಎ ಮಹಿಳೆಗೆ ಮೀಸಲಿಟ್ಟಿರುವುದರಿಂದ ಕಾಂಗ್ರೆಸ್ ಬಿಜೆಪಿ, ಜಾ.ದಳ ಈ ಮೂರೂ ಪ್ರಮುಖ ಪಕ್ಷಗಳ ದಲಿತ ಸಮುದಾಯದ ಮುಖಂಡರಿಗೆ ಹಾಗೂ ಆಕಾಂಕ್ಷಿಗಳಿಗೆ ನಿರಾಸೆ ಹಾಗೂ ಆತಂಕ ಎದುರಾಗಿದೆ. ಇತ್ತ ಬಿಸಿಎಂ ಎ ವರ್ಗದ ವಿಶ್ವಕರ್ಮ, ಕುರುಬ ಗೌಡ, ನಾಮಧಾರಿ, ಮುಸ್ಲಿಂ ಹಾಗೂ ಕ್ರಿಶ್ಚಿಯನ್, ಇನ್ನಿತರ ಸಮುದಾಯದವರಲ್ಲಿ ಹರ್ಷ ಉಂಟಾಗಿದೆ.

ಮೀಸಲಾತಿ ಬದಲಾವಣೆಯಿಂದಾಗಿ ದಲಿತ ಸಮುದಾಯದ ಆದಿಜಾಂಬವ ಹಾಗೂ ಬೋವಿ ಸೇರಿದಂತೆ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಳ್ಳೂರು ಜಿಪಂ ಕ್ಷೇತ್ರ ಇದೀಗ ಬಿಸಿಎಂ ಎ ಮಹಿಳೆಗೆ ಮೀಸಲಾಗಿರುವುದರಿಂದ ಮೂರೂ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಆಕಾಂಕ್ಷಿಗಳು ಪೈಪೋಟಿಯ ಮೂಲಕ ಸ್ಪಽಸಲು ರಾಜಕೀಯ ಕಾರ್ಯತಂತ್ರ ನಡೆಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಬಿಸಿಎಂಗೆ ಮೀಸಲಾತಿ ದೊರಕಿಲ್ಲ ಎಂದು ಈ ಮೊದಲು ಈ ಸಮುದಾಯದ ಅನೇಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಹೈರಿಗೆ ಜಿಪಂ ಕ್ಷೇತ್ರಒಂದು ಮಾತ್ರ ಮೀಸಲಾಗಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ವಿಚಾರದಲ್ಲಿ ರಾಜಕೀಯ ಸಂಕಷ್ಟ ಎದುರಿಸುವಂತಾಗಿದೆ. ಒಂದೇ ಮೀಸಲು ಕ್ಷೇತ್ರದಲ್ಲಿ ಮೂರು ಪಕ್ಷಗಳು ಪರಿಶಿಷ್ಟ ಜಾತಿಯ ಯಾವ ಸಮುದಾಯದ ಅಭ್ಯರ್ಥಿಗಳಿಗೆ, ಮುಖಂಡರಿಗೆ ಅವಕಾಶ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಪ್ರತಿ ಜಿಪಂ ಚುನಾವಣಾ ಮೀಸಲಾತಿ ಹಂಚಿಕೆಯ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಎರಡು ಕ್ಷೇತ್ರಗಳ ದೊರೆಯುತ್ತಿದ್ದವು. ಆದರೆ ಈ ಬಾರಿ ಪರಿಶಿಷ್ಟ ಜಾತಿಗೆ ಒಂದೇ ಒಂದು ಕ್ಷೇತ್ರ ದೊರಕಿದೆ. ಮತ್ತೊಂದೆಡೆ, ಪರಿಶಿಷ್ಟ ಪಂಗಡಕ್ಕೆ ಒಂದು ಕ್ಷೇತ್ರ ಮೀಸಲಾಗುತ್ತಿದ್ದ ತಾಲ್ಲೂಕಿನಲ್ಲಿ ಈ ಬಾರಿ ಎರಡು ಕ್ಷೇತ್ರಗಳು ಮೀಸಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೀಸಲಾತಿ ಬದಲಾವಣೆಯ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಮುಖಂಡರು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

” ಈ ಬಾರಿ ಜಿಪಂ ಕ್ಷೇತ್ರದ ಮೀಸಲಾತಿಗಳ ಬದಲಾವಣೆಯಿಂದ ಕ್ಷೇತ್ರದ ಪ್ರಭಾವಿ ಸಮುದಾಯದ ಅನೇಕ ಆಕಾಂಕ್ಷಿಗಳು ಸ್ಪರ್ಧೆಯಿಂದ ವಂಚಿತವಾದರೆ ಹಿಂದುಳಿದ ವರ್ಗದವರು ಅಧಿಕಾರ ಹಿಡಿಯಲುಅವಕಾಶ ಲಭಿಸಿದೆ. ಕಳೆದ ಬಾರಿ ಇದೇ ವರ್ಗದಿಂದ ಚುನಾಯಿತರಾಗಿದ್ದ ಜಾ.ದಳದ ನಯೀಮ ಸುಲ್ತಾನ್ ನಜೀರ್ ಮತ್ತು ಪರಿಮಳ ಶಾಮ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.”

 

 

Tags:
error: Content is protected !!