ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಹೇಗಿದೆಯೆಂದರೆ ಬೇಸಿಗೆ ಬಿರುಬಿಸಿಲಿಗಿಂತಲೂ ಜೋರಾಗಿದೆ. ಇತ್ತೀಚೆಗೆ ಹಾಲು, ಮೊಸರು ಬಸ್ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ.೩೫ರಿಂದ ೩೫ಕ್ಕೆ ಏರಿಸುವ ಶಾಕ್ ನೀಡಲಾಗಿದೆ. ಬೆಲೆ ಏರಿಕೆ ಶಾಕ್ ನೀಡುವಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಳ ನಿಸ್ಸೀಮರು.
ಕಾಕತಾಳಿಯವೋ ಏನೋ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿಗೆ ಬಂದ ಮೇಲೆ ಹಲವರು ಐಟಂಗಳ ಬೆಲೆ ಏರಿಸಿದ್ದಾರೆ. ಅದರಲ್ಲೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಹೊಡೆತವೇ ಜಾಸ್ತಿ. ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ಪದಾರ್ಥಗಳ ಬೆಲೆ ಹೆಚ್ಚಿಸಿದರೆ, ರಾಜ್ಯ ಸರ್ಕಾರ ಅದೇ ರೀತಿಯ ಹಾದಿ ಹಿಡಿಯುವ ಮೂಲಕ ಪೈಪೋಟಿಗೆ ಬಿದ್ದಂತಿದೆ. ಇದರಿಂದ ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಂತಾಗಿದೆ. ಹೀಗೆ ಲಂಗೂ ಲಗಾಮಿಲ್ಲದೆ ಬೆಲೆ ಏರಿಕೆಯಾಗುತ್ತಿದ್ದರೆ ಬೆಲೆ ನಿಯಂತ್ರಿಸುವವರು ಯಾರು? ಜನಸಾಮಾನ್ಯರ ಕಷ್ಟ ಕೇಳುವವರು ಯಾರು?
-ವಿ.ಎಸ್. ಗೋಪಾಲಕೃಷ್ಣ, ಮೈಸೂರು



