Mysore
29
broken clouds

Social Media

ಮಂಗಳವಾರ, 17 ನವೆಂಬರ್ 2026
Light
Dark

ಖಾಸಗಿ ಆಸ್ಪತ್ರೆಗಳೇ ಗಮನಿಸಿ: ಚಿಕಿತ್ಸಾ ದರಪಟ್ಟಿ ಹಾಕದಿದ್ದರೆ ಕ್ರಮ!

Dharmasthala Case No Acts Should Tarnish the culture of dharmasthala temple

ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆಗೆ ಎಷ್ಟು ಖರ್ಚು? ಈ ಮಾಹಿತಿ ರೋಗಿಗಳಿಗೆ ಮೊದಲೇ ಸಿಗುವಂತೆ ಮಾಡಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರಾಜ್ಯದ ಖಾಸಗಿ ಆಸ್ಪತ್ರೆಗಳು ಪ್ರಮುಖ ಚಿಕಿತ್ಸೆಗಳು ಹಾಗೂ ವೈದ್ಯಕೀಯ ಪ್ರಕ್ರಿಯೆಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಉಳಿದ ಚಿಕಿತ್ಸೆಗಳ ದರಗಳನ್ನು ಪ್ರತ್ಯೇಕ ಬುಕ್‌ಲೆಟ್‌ನಲ್ಲಿ ದಾಖಲಿಸಿ, ರೋಗಿಗಳು ಅಥವಾ ಸಂಬಂಧಿಕರು ಕೇಳಿದಾಗ ನೀಡಬೇಕು.

ಆಸ್ಪತ್ರೆಗಳಿಗೆ ಭೇಟಿ ನೀಡಿ ನಿಯಮ ಪಾಲನೆಯನ್ನು ಪರಿಶೀಲಿಸುವಂತೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅನುಷ್ಠಾನದಲ್ಲಿ ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತರಬೇಕು ಎಂದೂ ಸೂಚಿಸಲಾಗಿದೆ.

ದರಪಟ್ಟಿ ಪ್ರದರ್ಶಿಸದೆ ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.

Tags:
error: Content is protected !!