Mysore
27
light rain

Social Media

ಭಾನುವಾರ, 15 ನವೆಂಬರ್ 2026
Light
Dark

ಅನ್ನಭಾಗ್ಯ ಅಕ್ಕಿ ಅಕ್ರಮಕ್ಕೆ ಕಡಿವಾಣ: ₹8.80 ಕೋಟಿ ಅಕ್ಕಿ ಜಪ್ತಿ!

72.25 quintals of Annabhagya rice being transported illegally seized

ಬೆಂಗಳೂರು: ಬಡವರ ಹೊಟ್ಟೆ ತುಂಬಿಸಬೇಕಾದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ! ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ ಒಂದೇ ತಿಂಗಳಲ್ಲಿ 8 ಕೋಟಿ 80 ಲಕ್ಷ ರೂಪಾಯಿ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.

ಒಟ್ಟು 32,384 ಕ್ವಿಂಟಾಲ್‌ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಅಕ್ರಮ ಮಾರಾಟ ಹಾಗೂ ಸಾಗಣೆ ಪ್ರಕರಣಗಳಿಗೆ ಸಂಬಂಧಿಸಿ 266 ಜನರನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ 220 ವಾಹನಗಳು, 1,817 ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ 14,258 ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಕೂಡ ಜಪ್ತಿಯಾಗಿದೆ. ಆಹಾರ ಇಲಾಖೆಯ ಈ ಕಾರ್ಯಾಚರಣೆ ಕಾಳಸಂತೆ ದಂಧೆಗೆ ಬಿಸಿ ಮುಟ್ಟಿಸಿದೆ.

Tags:
error: Content is protected !!