Mysore
27
overcast clouds

Social Media

ಭಾನುವಾರ, 15 ನವೆಂಬರ್ 2026
Light
Dark

ಓದುಗರ ಪತ್ರ: ಮೋದಿಯವರ ಹೃದಯ ವೈಶಾಲ್ಯತೆಯೂ ಹಾಸ್ಯಪ್ರಜ್ಞೆಯೂ

dgp murder case

ಪ್ರಧಾನ ಮಂತ್ರಿ ಮೋದಿ ಅವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭಾರತದ ಮೊದಲ ಎಲ್‌ಇಡಿ ಬಾಗಿದ ಗುಮ್ಮಟ ತಾರಾಲಯದ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿದ್ದಾರೆ.

ಈ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ತೋರಿದ ಪ್ರೀತಿ ಮತ್ತು ಗೌರವ ರಾಜ್ಯದ ಜನರನ್ನು ಅಚ್ಚರಿಗೊಳಿಸು ವಂತಹದ್ದಾಗಿದೆ. ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಹಸಿರು ನಿಶಾನೆ ತೋರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಡಿಕೆಶಿ ಅವರನ್ನು ಕೈ ಹಿಡಿದು ಹತ್ತಿರಕ್ಕೆ ಕರೆದು ಇಬ್ಬರು ಜೊತೆಯಾಗಿ ಹಸಿರು ನಿಶಾನೆ ತೋರಿದ್ದು ಮೋದಿ ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಯಿತು. ಇದು ಕೇವಲ ನಿಶಾನೆ ಅಲ್ಲ ದೇಶ ಮತ್ತು ರಾಜ್ಯವನ್ನು ಒಂದಾಗಿ ಅಭಿವೃದ್ಧಿ ಮಾಡೋಣ ಎಂಬ ಸಂದೇಶವೂ ಇತ್ತು. ಇವರು ಬೇರೆ ಪಕ್ಷದ ಮುಖ್ಯಮಂತ್ರಿ ಎಂದು ಯಾವುದೇ ಭೇದ ಭಾವ ಮಾಡದೇ ಮೋದಿ ಅವರು ನಡೆದುಕೊಂಡ ರೀತಿ ಪ್ರeವಂತ ನಾಗರಿಕರ ಮೆಚ್ಚುಗೆ ಪಾತ್ರವಾಗಿದೆ.

ನಂತರ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಮೆಟ್ರೋ ಕೌಂಟರ್‌ನಲ್ಲಿ ಟಿಕೆಟ್ ತೆಗೆದುಕೊಳ್ಳಲು ಡಿಕೆಶಿ ಹಣ ನೀಡಲು ಹೋದಾಗ, ನಿಮಗೂ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿ ನಕ್ಕಿದ್ದು ಅವರ ಹಾಸ್ಯ ಪ್ರಜ್ಞೆಗೆ ಸಾಕ್ಷಿಯಾಯಿತು. ಮೋದಿ ಅವರು ಡಿಕೆಶಿಯೊಂದಿಗೆ ಆತ್ಮೀಯವಾಗಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಜನಮಾನಸದಲ್ಲಿ ಬಹುಕಾಲ ಉಳಿಯುವಂತಹದ್ದು.

ನಾನು ಗಮನಿಸಿದಂತೆ, ಮೋದಿಯವರು ಇಷ್ಟೊಂದು ಆತ್ಮೀಯವಾಗಿ ರಾಜ್ಯದ ಸ್ವಪಕ್ಷೀಯ ನಾಯಕರೊಂದಿಗೂ ಇದ್ದುದನ್ನು ನೋಡಿಯೇ ಇಲ್ಲ. ಇದು ಮೋದಿ ಅವರ ದೊಡ್ಡ ಗುಣ.

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!