Mysore
26
scattered clouds

Social Media

ಭಾನುವಾರ, 15 ನವೆಂಬರ್ 2026
Light
Dark

ಓದುಗರ ಪತ್ರ: ಜನ ಮೆಚ್ಚುಗೆಗೆ ಪಾತ್ರವಾದ ಪಾಲಿಕೆ ಆಯುಕ್ತರ ಕರ್ತವ್ಯ ನಿಷ್ಠೆ

ಓದುಗರ ಪತ್ರ

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ.ಕೆ. ಸವಿತಾ ಅವರ ಕಾರ್ಯವೈಖರಿ ಹಾಗೂ ಕರ್ತವ್ಯನಿಷ್ಠೆ ಸಹಜವಾಗಿ ನಗರವಾಸಿಗಳ ಗಮನಸೆಳೆದಿದೆ.

ಅಧಿಕಾರಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಸೇವಾಮನೋಭಾವನೆಯಿಂದ ಕಾರ್ಯ ಮಾಡಲು ಮುಂದಾದರೆ ಜನಮನ ಗೆಲ್ಲಬಹುದು ಎಂಬುದಕ್ಕೆ ಈ ಅಧಿಕಾರಿ ಉದಾಹರಣೆಯಾಗುತ್ತಾರೆ. ಹಿಂದೆ ಮೈಸೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಮೈಸೂರಿನ ಆಳ ಮತ್ತು ಅಗಲವನ್ನು ಅರಿತಿರುವ ಅವರಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿನ ಕೆಲಸಗಳು ವೇಗವನ್ನು ಪಡೆದುಕೊಂಡಿವೆ. ಅವುಗಳಲ್ಲಿ ಪ್ರಮುಖವಾದವು ಎಂದರೆ ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಅಂಚೆಯ ಮೂಲಕ ಮನೆಗೆ ಬರುವುದು, ಪಾರ್ಕ್ಗಳ (ನರ್ಸರಿ ಫಾರಂ, ಯೋಗಮಂಟಪ, ಸಂಗೀತ ಕಾರಂಜಿ,ಸುಸಜ್ಜಿತ ವಾಕಿಂಗ್ ಪಾಥ್)ಅಭಿವೃದ್ಧಿ, ಪೌರಕಾರ್ಮಿಕರಿಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ, ಮಹಿಳಾ ಪೌರಕಾರ್ಮಿಕರಿಗೆ ಎರಡು ಬನಾರಸ್, ಎರಡು ಕಾಟನ್ ಸೀರೆ, ಪುರುಷರಿಗೆ ಪ್ಯಾಂಟ್ ಮತ್ತು ಶರ್ಟ್ ನೀಡಿರುವುದು, ಮುಖ್ಯವಾಗಿ ತ್ಯಾಜ್ಯ ಮುಕ್ತತಾಣ ಮಾಡುವುದು ಹಾಗೂ ಉಚಿತವಾಗಿ ಇ-ಖಾತಾ ಅಭಿಯಾನ ಕಾರ್ಯಕ್ರಮಗಳು. ಇವರ ಕಾರ್ಯವೈಖರಿ ನೋಡಿದರೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಕಲ್ಲಿನ ಮೇಲೆ ಕೆತ್ತಿಸಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ನೆನಪಿಗೆ ಬರುತ್ತೆ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

 

Tags:
error: Content is protected !!