Mysore
22
broken clouds

Social Media

ಶುಕ್ರವಾರ, 13 ನವೆಂಬರ್ 2026
Light
Dark

ಓದುಗರ ಪತ್ರ: ಪೌರಕಾರ್ಮಿಕರ ಬದುಕು ಹಸನಾಗಿರಲಿ

ಸ್ವಚ್ಛತೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಸಾಂಸ್ಕೃತಿಕ ನಗರಿ ಮೈಸೂರು. ಇದೇ ವೇಳೆ ಹತ್ತನೆಯ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯು ರಾಜ್ಯದ ಮೊದಲ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿರುವುದು ಸಂತಸದ ವಿಷಯ. ಮುಂಜಾನೆಯೇ ಊರುಕೇರಿ, ನಗರಗಳನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರ ಸೇವೆ ತುಂಬಾ ದೊಡ್ಡದು.

ಕೈಯಲ್ಲಿ ಪೊರಕೆ ಹಿಡಿದು ರಸ್ತೆಗಳನ್ನು ಗುಡಿಸುವುದು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುವುದು ಮನೆಗಳ ಕಸವನ್ನು ಸಂಗ್ರಹಿಸುವ ಇವರ ಕಾಯಕದಿಂದಲೇ ಉತ್ತಮ ವಾತಾವರಣದಲ್ಲಿ ನಾಗರಿಕರು ಜೀವನ ನಡೆಸುತ್ತಿದ್ದಾರೆ. ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಪ್ರಾಣದ ಹಂಗನ್ನೂ ತೊರೆದು ಇವರು ಮಾಡಿದ ಸೇವೆ ಮರೆಯಲಾಗದು. ವೈದ್ಯರು ಹಾಗೂ ಪೊಲೀಸರಂತೆ ಇವರು ಮುಂಚೂಣಿಯಲ್ಲಿ ಕೆಲಸ ಮಾಡಿದ್ದರು. ಗಾಂಧೀಜಿಯವರ ಸ್ವಚ್ಛ ಭಾರತ್ ಕನಸನ್ನು ನನಸು ಮಾಡುತ್ತಿರುವ ಇವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಬೇಕು.

ಇಂತಹ ಪೌರ ಕಾರ್ಮಿಕರಲ್ಲಿ ಕೆಲವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇವರ ಉದ್ಯೋಗವನ್ನು ಇನ್ನೂ ಖಾಯಂಗೊಳಿಸಿಲ್ಲ. ಸ್ವಚ್ಛತೆಯ ಭಾಷಣವನ್ನು ಕಾರ್ಯರೂಪಕ್ಕೆ ತರುತ್ತಿರುವ ಇಂತಹವರು ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣ ನಿರ್ಮಿಸುವುದು ಸರ್ಕಾರದ ಕರ್ತವ್ಯವಾಗಿದೆ.ಸ್ವಚ್ಛನಗರದ ಪ್ರಶಸ್ತಿ ಗೆ ಮೂಲ ಕಾರಣಕರ್ತರು ಈ ಪೌರಕಾರ್ಮಿಕರು.

 -ಪಿ. ಸಿ. ಕಂಗಾಣಿ ಸೋಮು, ಮೈಸೂರು

Tags:
error: Content is protected !!