Mysore
30
scattered clouds

Social Media

ಗುರುವಾರ, 12 ನವೆಂಬರ್ 2026
Light
Dark

ಬಾಳೆಗೊನೆಯಲ್ಲಿ ಡ್ರಗ್ಸ್‌ ಸಾಗಾಟ ಪ್ರಕರಣ: ನಂಜನಗೂಡು ನಂಟಿನ ಬಗ್ಗೆ ಎಸ್ಪಿ ಸ್ಪಷ್ಟನೆ

ಮೈಸೂರು: ಬಾಳೆಗೊನೆ ಮೂಲಕ ಡ್ರಗ್ಸ್‌ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಪೊಲೀಸರು ಬಂಧಿಸಿರುವ ಆರೋಪಿ ನಂಜನಗೂಡಿನಲ್ಲಿ ಬಾಳೆ ತೋಟ ಮಾಡುತ್ತಿದ್ದ. ಆತನ ತೋಟವನ್ನು ಪರಿಶೀಲಿಸಿದ್ದು, ಯಾವುದೇ ಮಾದಕ ದ್ರವ್ಯ ಅಥವಾ ಡ್ರಗ್ಸ್‌ಗೆ ಸಂಬಂಧಿಸಿದ ಪದಾರ್ಥಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ನಂಜನಗೂಡಿನಿಂದ ಬಾಳೆಗೊನೆಯಲ್ಲಿ ಡ್ರಗ್ಸ್‌ ಸಾಗಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೇರಳ ಪೊಲೀಸರೂ ಅಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಪಿಯ ಬಳಿ 800 ಗ್ರಾಂ ಡ್ರಗ್ಸ್‌ ಪತ್ತೆಯಾಗಿದ್ದು, ಅದನ್ನು ಬೆಂಗಳೂರಿನಿಂದ ತಂದಿರುವುದಾಗಿ ಆತ ಹೇಳಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ. ಕೇರಳ ಪೊಲೀಸರು ಮೈಸೂರು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಹೇಳಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಈ ವರ್ಷ ಡ್ರಗ್ಸ್‌ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಒಟ್ಟು 215 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tags:
error: Content is protected !!