Mysore
27
haze

Social Media

ಗುರುವಾರ, 12 ನವೆಂಬರ್ 2026
Light
Dark

ಓದುಗರ ಪತ್ರ: ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಸಿಗಲಿ

ಓದುಗರ ಪತ್ರ

ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ಸ್ಥಾನ ಪಡೆದಿದೆ. ಅದರಲ್ಲೂ ಬೆಂಗಳೂರು ಜಗತಿಕ ಐಟಿ ಹಬ್ ಎಂದೇ ಪ್ರಸಿದ್ಧಿ ಪಡೆದಿದೆ.

ಆದರೆ ಇದೇ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಐಟಿ ಕಂಪೆನಿಗಳಲ್ಲಿ ಕನ್ನಡಿಗ ನೌಕರರಿಗೆ ಸೂಕ್ತ ಅವಕಾಶ, ಗೌರವ ಮತ್ತು ಆದ್ಯತೆ ದೊರೆಯದಿರುವುದು ವಿಷಾದನೀಯ. ಕನ್ನಡಿಗರ ನೆಲ, ಜಲ, ಸಂಪನ್ಮೂಲ ಹಾಗೂ ಪ್ರತಿಭೆಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಕಂಪೆನಿಗಳು ಸ್ಥಳೀಯ ಉದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ತಾರತಮ್ಯ ತೋರಬಾರದು.

ಅರ್ಹತೆ ಮತ್ತು ಪ್ರತಿಭೆಯೇ ನೇಮಕಾತಿಯ ಮಾನದಂಡವಾಗಿರಬೇಕು. ಆದರೆ ಸ್ಥಳೀಯ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿ, ಅವರಿಗೆ ಭಾಷೆ ಅಥವಾ ಪ್ರಾದೇಶಿಕ ಹಿನ್ನೆಲೆಯ ಆಧಾರದ ಮೇಲೆ ಅನ್ಯಾಯ ಮಾಡುವುದು ಸರಿಯಲ್ಲ. ಕನ್ನಡಿಗರು ಉದ್ಯೋಗಕ್ಕಾಗಿ ತಮ್ಮದೇ ನೆಲದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು.

ಕಂಪೆನಿಗಳು ಸ್ಥಳೀಯ ಯುವಜನರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ, ಸಮಾನ ಅವಕಾಶಗಳನ್ನು ಒದಗಿಸಬೇಕು. ಅರ್ಹತೆಗೆ ಮನ್ನಣೆ, ಸ್ಥಳೀಯರಿಗೆ ನ್ಯಾಯ ಮತ್ತು ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತಾಗಲಿ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 

Tags:
error: Content is protected !!