ರಾಜ್ಯದ ೬೩ ಪೆಟ್ರೋಲ್ ಬಂಕ್ಗಳಿಂದ ಸಂಗ್ರಹಿಸಿದ ಮಾದರಿಗಳನ್ನುಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇಂಧನದಲ್ಲಿ ಶೇಕಡಾ ೩೫ರಷ್ಟು ಎಥೆನಾಲ್ ಮಿಶ್ರಣವಾಗಿರುವುದು ದೃಢಪಟ್ಟಿದೆ. ನಿಗದಿತ ಇ೨೦ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಸೇರಿಸುತ್ತಿರುವುದು ಸಾರ್ವಜನಿಕರಿಗೆ ಎಸಗುತ್ತಿರುವ ಶೋಷಣೆ ಮತ್ತು ಧನ ವಂಚನೆಯಾಗಿದೆ.
ಗ್ರಾಹಕರು ಪಾವತಿಸುವ ಹಣಕ್ಕೆ ತಕ್ಕಂತೆ ಶುದ್ಧ ಹಾಗೂ ಗುಣಮಟ್ಟದ ಇಂಧನವನ್ನು ಪಡೆಯುವುದು ಅವರ ಹಕ್ಕು. ಅತಿಯಾದ ಎಥೆನಾಲ್ ಮಿಶ್ರಣದಿಂದಾಗಿ ವಾಹನಗಳ ಎಂಜಿನ್ಗಳಿಗೆ ಹಾನಿಯಾಗುತ್ತಿದ್ದು ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಈ ಗಂಭೀರ ವಿಚಾರದಲ್ಲಿ ತೈಲ ಕಂಪೆನಿಗಳು ಸ್ಪಷ್ಟವಾದ ಉತ್ತರ ನೀಡದೆ ಜಾರಿಕೊಳ್ಳುತ್ತಿರುವುದು ಖಂಡನೀಯ. ಇಂಧನ ಮಾರಾಟ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಇ೧೦, ಇ೨೦ ಅಥವಾ ಇತರ ಆಯ್ಕೆಯ ಇಂಧನವನ್ನು ಬಳಸುವ ಸಂಪೂರ್ಣ ಹಕ್ಕನ್ನು ಗ್ರಾಹಕರಿಗೆ ನೀಡಬೇಕು ಹಾಗೂ ಈ ಅಕ್ರಮ ಎಸಗಿದ ಜವಾಬ್ದಾರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು




