Mysore
28
overcast clouds

Social Media

ಶನಿವಾರ, 07 ನವೆಂಬರ್ 2026
Light
Dark

10 ದಿನಗಳಲ್ಲಿ 6 ಅಡಿ ಕುಸಿದ ಕೆಆರ್‌ಎಸ್‌: 98 ಅಡಿಗೆ ಇಳಿದ ನೀರಿನ ಮಟ್ಟ, ರೈತರಲ್ಲಿ ಆತಂಕ!

KRS Dam

ಮಂಡ್ಯ: ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.

ಕಳೆದ ಹತ್ತು ದಿನಗಳಲ್ಲಿ ನೀರಿನ ಮಟ್ಟ ಆರು ಅಡಿ ಇಳಿದಿದೆ. 104 ಅಡಿಯಷ್ಟಿದ್ದ ನೀರಿನ ಮಟ್ಟ ಇದೀಗ 98 ಅಡಿಗೆ ತಲುಪಿದ್ದು, ಜಲಾಶಯದಲ್ಲಿ 21.689 ಟಿಎಂಸಿ ನೀರು ಸಂಗ್ರಹವಾಗಿದೆ.

ಮಳೆಯ ಕೊರತೆ ಹಾಗೂ ನಿರಂತರ ನೀರು ಬಿಡುಗಡೆಯ ನಡುವೆ, ಮುಂದಿನ ದಿನಗಳಲ್ಲಿ ಬೆಳೆಗಳಿಗೆ ನೀರು ಸಿಗುತ್ತದೆಯೇ ಎಂಬ ಚಿಂತೆ ಅನ್ನದಾತರನ್ನು ಕಾಡುತ್ತಿದೆ.

ಈ ಮಧ್ಯೆ, ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ ಎಂದು ವರದಿಯಾಗಿದೆ.

Tags:
error: Content is protected !!