Mysore
29
light rain

Social Media

ಗುರುವಾರ, 05 ನವೆಂಬರ್ 2026
Light
Dark

ರಾಜ್ಯದ ರೈತರಿಗೆ ಸಿಹಿಸುದ್ದಿ: 2500ರೂ ಇದ್ದ ಬರ ಪರಿಹಾರದ ಮೊತ್ತ 5000ರೂಗೆ ಏರಿಕೆ

DCM DK Shivakumar

ಬೆಂಗಳೂರು: ರೈತರಿಗೆ ದೀಪಾವಳಿ ಹೊತ್ತಿನಲ್ಲಿ ಪರಿಹಾರದ ಸಿಹಿ ಸುದ್ದಿ. ಈ ಹಿಂದೆ ₹2,500 ಇದ್ದ ಬರ ಪರಿಹಾರವನ್ನು ಒಟ್ಟು ₹5,000ಕ್ಕೆ ಹೆಚ್ಚಿಸುವುದಾಗಿ ಡಿಕೆ ಶಿವಕುಮಾರ್‌ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಯಾದಗಿರಿ ಜಿಲ್ಲೆಯ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಮೂಲಕ ಪರಿಹಾರ ವಿತರಣೆಗೆ ಚಾಲನೆ ನೀಡಲಾಗಿದೆ.

ಮೊದಲ ಹಂತದಲ್ಲಿ ರೈತರ ಖಾತೆಗೆ ₹2,500 ಜಮೆ ಮಾಡಲಾಗುತ್ತಿದ್ದು, ದೀಪಾವಳಿ ಮುಗಿದ ಬಳಿಕ ಮತ್ತೊಂದು ಕಂತಿನಲ್ಲಿ ₹2,500 ನೀಡುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಪ್ರತಿ ರೈತನಿಗೆ ಒಟ್ಟು ₹5,000 ಪರಿಹಾರ ದೊರೆಯಲಿದೆ.

ಪರಿಹಾರ ವಿತರಣೆಗೆ ₹1,250 ಕೋಟಿ ಹಣ ನೀಡುತ್ತಿರುವುದಾಗಿ ಹೇಳಿರುವ ಡಿಕೆ ಶಿವಕುಮಾರ್‌, ಡಿಬಿಟಿ ಮೂಲಕ ಹಣ ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

Tags:
error: Content is protected !!