Mysore
28
scattered clouds

Social Media

ಗುರುವಾರ, 05 ನವೆಂಬರ್ 2026
Light
Dark

ಓದುಗರ ಪತ್ರ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಿ

ಕಟ್ಟಡ ನಿರ್ಮಾಣ ಕಾರ್ಮಿಕರು ದಿನ ನಿತ್ಯ ಕೂಲಿ ಕೆಲಸಕ್ಕಾಗಿ ೫೦ರಿಂದ ೮೦ ಕಿ.ಮೀ. ಪ್ರಯಾಣ ಮಾಡುತ್ತಾರೆ. ಬಹುತೇಕ ಕಾರ್ಮಿಕರ ಬಳಿ ದ್ವಿಚಕ್ರ ವಾಹನ ಸೌಲಭ್ಯ ಇರುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಟ್ಟಡ ಮತ್ತು ಕಾರ್ಮಿಕರಿಗೆ ೬೦ ಕಿ.ಮೀ.ವ್ಯಾಪ್ತಿಗೆ ಬಸ್ ಪಾಸ್ ಸೌಲಭ್ಯ ಕಲ್ಪಿಸಿತ್ತು. ಆದರೆ ಈಗ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ‘ಸೇಫ್ಟಿ ಕಿಟ್’ ಸೌಲಭ್ಯವನ್ನು ಬಿಟ್ಟರೆ ಬೇರೆ ಯಾವುದೇ ಸೌಲಭ್ಯವನ್ನು ಕಲ್ಪಿಸಿಲ್ಲ. ರಾಜ್ಯ ಸರ್ಕಾರ ಕೂಡಲೇ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಈ ಮೊದಲು ಇದ್ದಂತೆ ೬೦ ಕಿ.ಮೀ. ವ್ಯಾಪ್ತಿಯ ಪ್ರಯಾಣಕ್ಕೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು.

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ

Tags:
error: Content is protected !!