Mysore
26
light rain

Social Media

ಗುರುವಾರ, 05 ನವೆಂಬರ್ 2026
Light
Dark

ಓದುಗರ ಪತ್ರ: ಕಾಫಿ, ಟೀ ದರ ಹೆಚ್ಚಳ ಗ್ರಾಹಕರಿಗೆ ಹೊರೆಯಾಗದಿರಲಿ

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರೊಂದಿಗೆ ಹಾಲಿನ ಬೆಲೆಯೂ ಹೆಚ್ಚಾಗಿರುವುದರಿಂದ ಹೋಟೆಲ್ ಮಾಲೀಕರು ಕಾಫಿ, ಟೀಗೆ ೫ ರೂ. ಬದಲು ೨ ರೂ. ಹೆಚ್ಚಳ ಮಾಡಿದರೆ ನ್ಯಾಯಯುತ ನಿರ್ಧಾರವಾಗುತ್ತದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡರು ಹೇಳಿರುವುದು ಸ್ವಾಗತಾರ್ಹ. ಈಗಾಗಲೇ ಕೆಎಂಎಫ್ ಹಾಲು ಮತ್ತು ಮೊಸರಿನ ಬೆಲೆಯನ್ನು ವಿಪರೀತವಾಗಿ ಅವೈಜ್ಞಾನಿಕವಾಗಿ ಏರಿಸಿರುವುದು ಸರಿಯಲ್ಲ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಹಾಲು ಮತ್ತು ಮೊಸರಿನ ಬೆಲೆಯನ್ನು ಪರಿಷ್ಕರಿಸುವುದು ಅತ್ಯಗತ್ಯ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!