Mysore
28
overcast clouds

Social Media

ಮಂಗಳವಾರ, 03 ನವೆಂಬರ್ 2026
Light
Dark

ಓದುಗರ ಪತ್ರ: ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ಸಿಗಲಿ

ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾದ ನಾಡಧ್ವಜಕ್ಕೆ ಇದುವರೆಗೂ ಅಧಿಕೃತ ಸ್ಥಾನಮಾನ ದೊರೆಯದಿರುವುದು ನೋವಿನ ಸಂಗತಿಯಾಗಿದೆ. ವಿವಿಧ ರಾಜ್ಯಗಳಲ್ಲಿ ಅಲ್ಲಿನ ಧ್ವಜಗಳಿಗೆ ಗೌರವವಿದ್ದರೂ ನಮ್ಮ ರಾಜ್ಯದಲ್ಲಿ ಮಾತ್ರ ಕನಿಷ್ಠ ಕಾನೂನು ರಕ್ಷಣೆಯೂ ಇಲ್ಲದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಶೇ.೯೦ರಷ್ಟು ಜನತೆ ನಾಡಧ್ವಜದ ಅಧಿಕೃತ ಬಳಕೆಗಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಆಡಳಿತ ನಡೆಸುವವರು ಈ ಕುರಿತು ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಸರ್ಕಾರವು ಎಚ್ಚೆತ್ತುಕೊಂಡು ಕನ್ನಡ ಧ್ವಜಕ್ಕೆ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಸ್ಥಾನಮಾನ ನೀಡಬೇಕು. ಕನ್ನಡಿಗರ ಧ್ವನಿಯನ್ನು ನಿರ್ಲಕ್ಷಿಸುವುದು ತರವಲ್ಲ.

– ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!