Mysore
23
overcast clouds

Social Media

ಭಾನುವಾರ, 01 ನವೆಂಬರ್ 2026
Light
Dark

ಓದುಗರ ಪತ್ರ: ಬದುಕಿಗೆ ಹೊಸ ಬೆಳಕು ಮೂಡಿಸಿ

ಕರ್ನಾಟಕ ಸರ್ಕಾರವು ಸರ್ಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಎ ಪ್ರವರ್ಗದ ಅಭ್ಯರ್ಥಿಗಳಿಗೂ ಒಂದು ಬಾರಿಯ ಕ್ರಮವಾಗಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿದ್ದು, ೨೦೨೭ರ ಡಿಸೆಂಬರ್ ೩೧ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ.

ಇದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-೧ರ ಅಭ್ಯರ್ಥಿಗಳ ಗರಿಷ್ಟ ವಯೋಮಿತಿ ೪೦ರಿಂದ ೪೫ ವರ್ಷಕ್ಕೆ ವಿಸ್ತರಣೆಯಾಗಿದೆ. ಆದರೆ ೧೯೮೧ರಲ್ಲಿ ಜನಿಸಿದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಈ ಅವಕಾಶವೂ ಸಾಲದಾಗಿದೆ. ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಉದ್ಯೋಗದ ಕನಸು ಕಂಡಿದ್ದರೂ ಸೂಕ್ತ ಸಮಯದಲ್ಲಿ ನೇಮಕಾತಿಗಳು ನಡೆಯದೆ, ಈಗ ವಯೋಮಿತಿ ಸಡಿಲಿಕೆಯ ಲೆಕ್ಕಾಚಾರದಲ್ಲಿಯೂ ೪೬ ವರ್ಷಗಳ ಗಡಿ ಎದುರಾಗಿರುವುದರಿಂದ ಅವಕಾಶ ಕೈತಪ್ಪುವ ಆತಂಕದಲ್ಲಿದ್ದಾರೆ. ೧೯೮೧ರಲ್ಲಿ ಜನಿಸಿದ ಅಭ್ಯರ್ಥಿಗಳ ಸಂಕಷ್ಟವನ್ನು ಸರ್ಕಾರ ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಬೇಕು. ಈಗಾಗಲೇ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿರುವ ಸರ್ಕಾರ, ಈ ಅಭ್ಯರ್ಥಿಗಳಿಗೆ ಕೇವಲ ಒಂದು ವರ್ಷದ ಹೆಚ್ಚುವರಿ ವಯೋಮಿತಿ ಸಡಿಲಿಕೆ ನೀಡಿದರೆ ಅವರ ಬದುಕಿಗೆ ಹೊಸ ಬೆಳಕು ಮೂಡಿಸಿದಂತಾಗುತ್ತದೆ. ಇಷ್ಟು ವರ್ಷಗಳ ಪರಿಶ್ರಮ, ಕನಸು ಮತ್ತು ನಿರೀಕ್ಷೆಗಳಿಗೆ ಒಂದು ಅವಕಾಶ ಸಿಕ್ಕಂತಾಗುತ್ತದೆ.

-ಎಂ. ಮಹದೇವ, ಕರಿಯನಪುರ, ಕೊಳ್ಳೇಗಾಲ ತಾ.

Tags:
error: Content is protected !!