Mysore
30
clear sky

Social Media

ಶನಿವಾರ, 31 ಅಕ್ಟೋಬರ್ 2026
Light
Dark

ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಡಿಕೆಶಿ: ಹೆಚ್ಚುವರಿ ಹಣ ರೈತರಿಗೆ!

Guarantee schemes will continue DCM D K Shivakumar

ಬೆಂಗಳೂರು: ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ, ಸರ್ಕಾರದ ನಿರ್ಧಾರವನ್ನು ಡಿ.ಕೆ. ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ.

ನವೆಂಬರ್‌ ಒಂದರಿಂದ ಪ್ರತಿ ಲೀಟರ್‌ ಹಾಲಿನ ದರ ಎಂಟು ರೂಪಾಯಿ ಹೆಚ್ಚಳವಾಗಲಿದೆ. ಇದರಲ್ಲಿ ಏಳು ರೂಪಾಯಿ ನೇರವಾಗಿ ಹೈನುಗಾರರಿಗೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.

ಜಾನುವಾರುಗಳ ಮೇವು, ಹಿಂಡಿ ಬೆಲೆ ಹೆಚ್ಚಳ, ಇಂಧನ ಮತ್ತು ಪ್ಯಾಕೇಜಿಂಗ್‌ ವೆಚ್ಚದ ಏರಿಕೆ ಹಾಗೂ ಬರಗಾಲದಿಂದ ಹಾಲಿನ ಸಂಗ್ರಹಣೆ ಕುಸಿದಿರುವುದು ದರ ಪರಿಷ್ಕರಣೆಗೆ ಪ್ರಮುಖ ಕಾರಣಗಳೆಂದು ವಿವರಿಸಿದ್ದಾರೆ.

ಈ ಹೆಚ್ಚಳದಿಂದ ರೈತರಿಗೆ ನೀಡುವ ಪ್ರತಿ ಲೀಟರ್‌ ಹಾಲಿನ ಖರೀದಿ ದರ 35 ರೂಪಾಯಿಯಿಂದ 42 ರೂಪಾಯಿಗೆ ಏರಲಿದೆ. ಸರ್ಕಾರದ ಐದು ರೂಪಾಯಿ ಪ್ರೋತ್ಸಾಹಧನ ಸೇರಿ ಒಟ್ಟು 47 ರೂಪಾಯಿ ಕೈಸೇರಲಿದೆ ಎಂದು ಹೇಳಿದ್ದಾರೆ.

ದಿನಕ್ಕೆ ಹತ್ತು ಲೀಟರ್‌ ಹಾಲು ಪೂರೈಸುವ ರೈತರಿಗೆ ತಿಂಗಳಿಗೆ ಸುಮಾರು 2,100 ರೂಪಾಯಿ ಹೆಚ್ಚುವರಿ ಆದಾಯ ದೊರೆಯಲಿದೆ. ರಾಜ್ಯದ ಹೈನುಗಾರ ಕುಟುಂಬಗಳಿಗೆ ವಾರ್ಷಿಕವಾಗಿ ಅಂದಾಜು 1,850ರಿಂದ 2,100 ಕೋಟಿ ರೂಪಾಯಿವರೆಗೆ ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ.

ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಈಗಲೂ ಕಡಿಮೆಯಿದೆ. ರೈತರ ಜೀವನೋಪಾಯದ ರಕ್ಷಣೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

Tags:
error: Content is protected !!