Mysore
31
clear sky

Social Media

ಗುರುವಾರ, 29 ಅಕ್ಟೋಬರ್ 2026
Light
Dark

ರಾಜ್ಯದಲ್ಲಿ ಒಂದೇ ವಾರದಲ್ಲಿ 702 ಹಾವು ಕಡಿತ, 6 ಸಾವು!

ಬೆಂಗಳೂರು: ರಾಜ್ಯದಲ್ಲಿ ಒಂದೇ ವಾರದಲ್ಲಿ 702 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲೂ ಮನೆಗಳೊಳಗೆ ಹಾವುಗಳು ಕಾಣಿಸಿಕೊಳ್ಳುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಮೂರು ದಿನಗಳಲ್ಲಿ ಸಹಾಯವಾಣಿಗಳಿಗೆ 200ಕ್ಕೂ ಹೆಚ್ಚು ಕರೆಗಳು ಬಂದಿರುವ ಮಾಹಿತಿ ಇದೆ.

ಶೂ ಸ್ಟ್ಯಾಂಡ್‌, ಬೈಕ್‌, ಬಾತ್‌ರೂಮ್‌ ಹಾಗೂ ವಾಷಿಂಗ್‌ ಮಷಿನ್‌ಗಳ ಬಳಿ ಹಾವುಗಳು ಪತ್ತೆಯಾಗುತ್ತಿವೆ. ಅಭಿವೃದ್ಧಿ ಕಾಮಗಾರಿಗಳಿಂದ ಹಾವುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.

ಜನವರಿಯಿಂದ ರಾಜ್ಯದಲ್ಲಿ ಒಟ್ಟು 17,608 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, 205 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ರೀಲ್ಸ್‌ ಮಾಡುವುದಕ್ಕಾಗಿ ಹಾವು ಹಿಡಿಯುವ ಸಾಹಸಕ್ಕೆ ಮುಂದಾಗಬೇಡಿ ಎಂದು ಉರಗ ತಜ್ಞರು ಎಚ್ಚರಿಸಿದ್ದಾರೆ. ಹಾವು ಕಂಡರೆ ಸುರಕ್ಷಿತ ಅಂತರ ಕಾಯ್ದುಕೊಳ್ಳಿ. ಸ್ವತಃ ಹಿಡಿಯಲು ಪ್ರಯತ್ನಿಸದೆ, ತರಬೇತಿ ಪಡೆದ ಉರಗ ಸಂರಕ್ಷಕರನ್ನು ಸಂಪರ್ಕಿಸಿ.

Tags:
error: Content is protected !!