Mysore
30
clear sky

Social Media

ಸೋಮವಾರ, 12 ಅಕ್ಟೋಬರ್ 2026
Light
Dark

ಎಚ್.ಡಿ.ಕೋಟೆಯಲ್ಲಿ ರಂಗೇರಿದ ನವರಾತ್ರಿ ಉತ್ಸವ

ಮಂಜು ಕೋಟೆ

ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ೯ ದಿನಗಳು ವಿವಿಧ ಕಾರ್ಯಕ್ರಮ

ಎಚ್.ಡಿ.ಕೋಟೆ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾನುವಾರ ಪ್ರಾರಂಭವಾಗಿದ್ದರೆ ಇತ್ತ ಪಟ್ಟಣದ ಶ್ರೀ ವರದರಾಜಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡಿದೆ.

ಕೋಟೆ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ದೇವಸ್ಥಾನ ಸಮಿತಿ ಮತ್ತು ಸಾರ್ವಜನಿಕರಿಂದ ಮಿನಿ ದಸರಾ ಕಾರ್ಯಕ್ರಮವನ್ನು ೧೦ ದಿನಗಳ ಕಾಲ ನಡೆಸಲು ಸಕಲ ಸಿದ್ಧತೆಯನ್ನು ನಡೆಸಲಾಗಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನ ಸೇರಿದಂತೆ ಮೊದಲನೇ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಹೌಸಿಂಗ್ ಬೋರ್ಡ್‌ನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕೂಡ ೯ ದಿನಗಳ ಕಾಲ ನವರಾತ್ರಿಯ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ದೇವಸ್ಥಾನದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಈ ಎರಡೂ ದೇವಸ್ಥಾನಗಳಲ್ಲಿ ನಡೆಯುತ್ತಿರುವ ನವರಾತ್ರಿಯ ಉತ್ಸವ, ಮಿನಿ ದಸರಾ ಕಾರ್ಯಕ್ರ ಮಗಳು ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿಸಿವೆ.

ನವರಾತ್ರಿಯ ಕೊನೆಯ ದಿನ ಅ.೨೧ರ ವಿಜಯದಶಮಿ ದಿನದಂದು ಎರಡೂ ದೇವಸ್ಥಾನಗಳಲ್ಲಿ ಮಿನಿ ದಸರಾ ಕಾರ್ಯಕ್ರಮ ಅದ್ಧೂರಿ ಯಾಗಿ ನಡೆಯಲಿದೆ. ಇದನ್ನು ನೋಡಲು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಿಂದ ಸಾವಿರಾರು ಜನರು ಆಗಮಿಸಲಿದ್ದಾರೆ. ೯ ದಿನಗಳ ಕಾಲವೂ ಎರಡೂ ದೇವಸ್ಥಾನಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

” ಸಂಪ್ರದಾಯದಂತೆ ಶ್ರೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ಈ ಬಾರಿಯೂ ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ನವರಾತ್ರಿ ಉತ್ಸವ ಮಿನಿ ದಸರಾವನ್ನು ಆಚರಿಸಲಾಗುತ್ತದೆ. ೯ ದಿನಗಳ ಕಾಲ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದು ವಿಜಯ ದಶಮಿಯ ದಿನದಂದು ಸಮಿತಿಯವರು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಿನಿ ದಸರಾ ನಡೆಸಲಾಗುತ್ತದೆ.”

ತಿರುಮಲಾಚಾರ್, ಮುಖ್ಯಸ್ಥರು, ಶ್ರೀ ವರದರಾಜ ಸ್ವಾಮಿ ದೇವಸ್ಥಾನ 

” ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡಿ ದೇವಿಗೆ ನಿತ್ಯವೂ ವಿಶೇಷ ಕಾರ್ಯಕ್ರಮ ನೆರವೇರಲಿದೆ. ನವರಾತ್ರಿ ಕೊನೆಯ ದಿನದಂದು ಮಿನಿ ದಸರಾದ ಉತ್ಸವ ನಡೆಯಲಿದ್ದು, ೯ ದಿನಗಳ ಕಾಲವೂ ಅದ್ಧೂರಿಯಾಗಿ ನವರಾತ್ರಿ ಉತ್ಸವ ನಡೆಯಲಿದೆ. ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.”

ನಟರಾಜ್, ಅಧ್ಯಕ್ಷ, ಚಾಮುಂಡೇಶ್ವರಿ ದೇವಸ್ಥಾನ 

 

 

Tags:
error: Content is protected !!