ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು.
ಅಂತೆಯೇ ಮೈಸೂರಿನಲ್ಲಿ ಸಂಚಾರ ವ್ಯವಸ್ಥೆ ಹೇಗಿದೆ ಎಂಬುದನ್ನು ಅರಿಯಲು ಇಡೀಮೈಸೂರು ನಗರ ಪ್ರದಕ್ಷಿಣೆ ಮಾಡಬೇಕಿಲ್ಲ. ಮೈಸೂರಿನ ಹೃದಯ ಭಾಗದಲ್ಲಿರುವ ಅರಮನೆಯ ದಕ್ಷಿಣ ಪ್ರವೇಶ ದ್ವಾರದ ಎದುರು ಇರುವ ಪಾದಚಾರಿ ಮಾರ್ಗವನ್ನು ಗಮನಿಸಿದರೆ ಸಾಕು. ಸಂಚಾರ ಪೊಲೀಸರ ಭಯವೇ ಇಲ್ಲ ಎಂಬುದನ್ನು ಈ ಚಿತ್ರ ಸಾರಿಹೇಳುತ್ತಿದೆ. ಮೈಸೂರಿನ ಅರಮನೆಯ ದಕ್ಷಿಣ ಪ್ರವೇಶ ದ್ವಾರದ ಎದುರು ಇರುವ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ಸವಾರಿಯೂ ನಡೆಯುತ್ತದೆ ಜತೆಗೆ ಅ ವಾಹನ ನಿಲ್ಲಿಸುವ ವಾಹನಗಳ ಸ್ಟಾಂಡ್ ಮಾಡಿಕೊಳ್ಳಲಾಗಿದೆ. ಸುಂದರವಾದ ಪಾದಚಾರಿ ರಸ್ತೆಯನ್ನು ಈ ರೀತಿ ಮಾಡಿಕೊಂಡರೆ ಸದ್ಯದಲ್ಲೆ ಫುಟ್ಪಾತ್ ವ್ಯಾಪಾರಿಗಳು ಇಲ್ಲಿಗೆ ಬಂದರೂ ಆಶ್ಚರ್ಯವಿಲ್ಲ. ಇದನ್ನು ಸಂಚಾರ ಪೊಲೀಸರ ನಿಷ್ಕ್ರಿಯತೆ ಎನ್ನಬೇಕೊ? ನಿರ್ಲಕ್ಷ್ಯವೆನ್ನಬೇಕೊ? ಇದಕ್ಕಿಂತ ಸಾಕ್ಷಿ ಬೇಕೇ? ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅರಮನೆಯ ದಕ್ಷಿಣ ದ್ವಾರದ ಬಳಿ ಇರುವ ಪಾದಚಾರಿ ಮಾರ್ಗದಲ್ಲಿ ವಾಹನಗಳು ಸಂಚರಿಸದಂತೆ ಕ್ರಮಕೈಗೊಳ್ಳಬೇಕು. ಹಾಗೆಯೇ ದ್ವಿಚಕ್ರ ವಾಹನಗಳು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ.
-ಪಿ.ಜೆ.ರಾಘವೇಂದ್ರ, ಮೈಸೂರು




