Mysore
31
few clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಓದುಗರ ಪತ್ರ: ನಕಲಿ ಔಷಧಿಗಳ ಜಾಲದ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

ಓದುಗರ ಪತ್ರ

ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ ಮಾತ್ರೆ, ಸಿರಪ್‌ಗಳು ಮಾರುಕಟ್ಟೆ ಪ್ರವೇಶಸುತ್ತಿವೆ ಎಂಬ ಮಾಹಿತಿ ಗಾಬರಿ ಮೂಡಿಸುತ್ತದೆ. ಗ್ರಾಹಕರಿಗೆ ಅಸಲಿ ಮತ್ತು ನಕಲಿ ಔಷಧಿಗಳ ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಅಸಾಧ್ಯವಾಗಿದೆ. ಈ ಗಂಭೀರ ಸಮಸ್ಯೆ ತಡೆಯಲು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮತ್ತಷ್ಟು ಎಚ್ಚೆತ್ತು ಕೊಳ್ಳಬೇಕಾಗಿದೆ. ಔಷಧಿ ಅಂಗಡಿಗಳ ಮೇಲೆ ನಿಯಮಿತವಾಗಿ ದಾಳಿ ನಡೆಸಿ ತಪಾಸಣೆ ಮಾಡಬೇಕು, ನಕಲಿ ಜಲದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಜನರ ಪ್ರಾಣದೊಂದಿಗೆ ಚೆಟ ಆಡುವವರ ವಿರುದ್ಧ ಕ್ರಮ ಅತ್ಯಗತ್ಯ.

 -ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!