Mysore
29
overcast clouds

Social Media

ಶನಿವಾರ, 10 ಅಕ್ಟೋಬರ್ 2026
Light
Dark

ಓದುಗರ ಪತ್ರ: ವಿಷಗಳಿಗೆ ಬರದಂತೆ ತಡೆಯೋಣ

ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು, ಬ್ರಿಟಿಷರು ಹೊರಗಿನವರೇ ಆಗಿದ್ದರೂ ಮನುಷ್ಯರಾಗಿದ್ದರು, ಮಾನವೀಯತೆವುಳ್ಳವರಾಗಿದ್ದರು. ರಾಹುಲ್ ಗಾಂಧಿಯವರು ನ್ಯಾಯಯುತವಾಗಿ ಅಹಿಂಸಾತ್ಮಕವಾಗಿ ಚುನಾವಣಾ ಆಯೋಗ ಮಾಡಿರುವ ದೇಶದ್ರೋಹ ಕೆಲಸವನ್ನು ಬಯಲಿಗೆಳೆದು ಮುಖ್ಯ ಚುನಾವಣಾ ಆಯುಕ್ತರನ್ನು ವಜ ಮಾಡಿ ಜನರಿಗೆ ನ್ಯಾಯ ದೊರಕಿಸಿಕೊಡಬೇಕು,

ಪ್ರಜಪ್ರಭುತ್ವ ಸಂವಿಧಾನ ಉಳಿಯಬೇಕು ಎಂದು ಪ್ರತಿಭಟನೆ ಮಾಡುವಾಗ ಬಂಧಿಸಿರುವುದು ಅತ್ಯಂತ ಕ್ರೂರವಾದದ್ದು. ಬನ್ನಿ ಪ್ರಜಪ್ರಭುತ್ವವಾದಿ, ಸಂವಿಧಾನವಾದಿ, ನ್ಯಾಯವಾದಿ, ಅಹಿಂಸಾವಾದಿ, ಗಾಂಧಿವಾದಿ, ಅಂಬೇಡ್ಕರ್‌ವಾದಿಗಳೆಲ್ಲ ನ್ಯಾಯದೇವತೆ ಬಂಧನಕ್ಕೊಳಗಾಗಿದ್ದಾರೆ ಬಿಡುಗಡೆಗೊಳಿಸೋಣ, ನಮ್ಮ ಬಂಧನವನ್ನು ನಾವೇ ಮಾಡಿಕೊಳ್ಳುವಂತಹ ವಿಷಗಳಿಗೆ ಬರದಂತೆ ತಡೆಯೋಣ.

ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ, ನಮ್ಮ ಸಹೋದರ, ಸಹೋದರಿಯರನ್ನು ಉಳಿಸಿಕೊಳ್ಳೋಣ. ಸಾಗರದಂತೆ ಸಾಗಿ ಬನ್ನಿ, ಸುನಾಮಿಯೆಂತೆ ಸುತ್ತಲೂ ಬನ್ನಿ, ಮುಂಗಾರಿನ ಗುಡುಗು ಸಿಡಿಲಿನಂತೆ ಅಬ್ಬರಿಸುತ್ತಾ ಬನ್ನಿ, ನಿಮ್ಮ ಉತ್ಸಾಹವೇ ನಮ್ಮ ಉತ್ಸಾಹವಾಗಲಿ. ಜೈ ಬಾಪು ಜೈ ಅಂಬೇಡ್ಕರ್ ಜೈ ಸಂವಿಧಾನ.

-ಎಲ್. ಶಂಭುಲಿಂಗಸ್ವಾಮಿ, ರಾಜ್ಯ ಜಂಟಿಕಾರ್ಯದರ್ಶಿ, ಕೆಪಿಸಿಸಿ ಮೀನುಗಾರರ ವಿಭಾಗ

Tags:
error: Content is protected !!