Mysore
30
broken clouds

Social Media

ಶುಕ್ರವಾರ, 09 ಅಕ್ಟೋಬರ್ 2026
Light
Dark

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು. ಅವನ್ನು ಕೈಯಲ್ಲಿ ತೆಗೆದುಕೊಂಡು ಖುಷಿಯಿಂದ ಜೇಬಿನೊಳಗೆ ಇರಿಸಿಕೊಳ್ಳಲಾಗುತ್ತಿತ್ತು. ಆ ನೋಟಗಳು ಎಷ್ಟು ಚೆನ್ನಾಗಿರುತ್ತಿದ್ದವು ಎಂದರೆಅವನ್ನು ಖರ್ಚು ಮಾಡಲು ಮನಸ್ಸು ಬರುತ್ತಿರಲಿಲ್ಲ. ಆದರೂ ಅಂತಹ ನೋಟುಗಳನ್ನು ಕೊಡಲೇಬೇಕಾಗಿತ್ತು.

ಕಾಲ ಬದಲಾದಂತೆ ಯಂತ್ರಗಳಲ್ಲೂ (ಅವಕ್ಕೂ ಮನುಷ್ಯರೇ ತಾನು ಹಣ ತುಂಬುವುದು)ಹಳೇ ನೋಟುಗಳು ಹೊಸ ನೋಟುಗಳ ಮಧ್ಯೆ ಬರಲಾರಂಭಿಸಿದವು. ಆದರೆ ಚಿತ್ರದಲ್ಲಿ  ತೋರಿಸಿರುವಂತೆ ಇಂತಹ ದುಸ್ಥಿತಿಯ(ಒಂದು ನೂರು ರೂ.ಮುಖಬೆಲೆ) ನೋಟನ್ನು ನಾನಂತೂ ನೋಡಿರಲಿಲ್ಲ. ಅದರ ದರ್ಶನವೂ ಗುರುವಾರ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ(ಮೆಡ್‌ಪ್ಲೆಸ್ ಎದುರಿಗಿರುವ ಘಟಕ)ನಿಂದ ಹಣ ಡ್ರಾ ಮಾಡುವಾಗ ಆಯಿತು.  ಗರಿಗರಿ ನೋಟಿಲ್ಲದಿದ್ದರೂ ಪರವಾಗಿಲ್ಲ ಇಂತಹ ಕೆಟ್ಟ ನೋಟುಗಳನ್ನು ಯಂತ್ರಕ್ಕೆ ತುಂಬಿಸುವ ಕೆಲಸ ಇನ್ನು ಮುಂದಾದರೂ ಆಗದಿರಲಿ ಎಂದು ಆಶಿಸೋಣ.

-ವಿಜಯಕುಮಾರ್, ಮೈಸೂರು

Tags:
error: Content is protected !!