ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಬಾಡಿಗೆಯ ಹೊರೆಯಾಗುತ್ತಿದೆ.
ಸರ್ಕಾರಿ ಇಲಾಖೆಗಳು ಖಾಸಗಿ ಕಟ್ಟಡಗಳಿಗೆ ಬಾಡಿಗೆ ಪಾವತಿಸುವುದರಿಂದ ಸಾರ್ವಜನಿಕರ ತೆರಿಗೆ ಹಣ ಅನಗತ್ಯವಾಗಿ ವೆಚ್ಚವಾಗುತ್ತಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಸರ್ಕಾರದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವಂತೆ, ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಮಿನಿ ವಿಧಾನಸೌಧವನ್ನು ನಿರ್ಮಿಸಲಾಗಿದೆ. ಆದರೆ ಕೆಲವು ಇಲಾಖೆಗಳು ಇನ್ನೂ ಖಾಸಗಿ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳುತ್ತಿಲ್ಲ. ಜೊತೆಗೆ ಬಾಡಿಗೆಯನ್ನು ನೀಡಬೇಕಾಗಿದೆ.
ಈ ವಿಚಾರಕ್ಕ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಹಾಗೂ ಸಂಸದರು ಮತ್ತು ಸಂಬಂಧ ಪಟ್ಟ ಹಿರಿಯ ಅದಿಕಾರಿಗಳು ಚಿಂತನೆ ನಡೆಸಿ ಖಾಸಗಿ ಕಟ್ಟಡಗಳ್ಳಲಿರುವ ಸರ್ಕಾರಿ ಕಚೇರಿಗಳನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವುದು ಒಳ್ಳೆಯದು. ಇಲ್ಲದಿದ್ದರೆ ಪುರಸಭೆಗೆ ಸೇರಿದ ಜಾಗದಲ್ಲಿ ಸ್ವಂತ ಕಟ್ಟಡಗಳಿದ್ದರೆ ಅದಕ್ಕೆ ಸ್ಥಳಾಂತರಿಸುವುದರಿಂದ ಅಷ್ಟರಮಟ್ಟಿಗೆ ಬಾಡಿಗೆ ಹಣ ಉಳಿಯುತ್ತದೆಯಲ್ಲವೇ?
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು



