ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್ ಅನ್ನು ಮುಸ್ಲಿಂ ಸಮುದಾಯದವರೇ ಚಾಲನೆ ಮಾಡಿ ಮೆರವಣಿಗೆ ಜಮಿಯಾ ಮಸೀದಿ ಮುಂದೆ ಬಂದಾಗ ಮಜ್ಜಿಗೆ, ಲಡ್ಡು ತಿನ್ನಲು ನೀಡಿ, ಕುಡಿಯಲು ತಂಪು ಪಾನೀಯ ನೀಡಿ, ಕೇಸರಿ ಶಾಲುಗಳನ್ನು ಹಾಕಿಕೊಂಡು ತಮ್ಮ ಭಾವೈಕ್ಯತೆಯ ಮೆರೆದಿದ್ದಾರೆ.
ಇದು ಮಂಡ್ಯ ಜಿಯ ಬಹುತೇಕ ಗ್ರಾಮಗಳಲ್ಲಿ ನಡೆಯುವ ಗಣೇಶೋತ್ಸವ ಮೆರವಣಿಗೆ ಕಾರ್ಯಕ್ರಮಗಳು, ಅದೇ ರೀತಿ ಮುಸ್ಲಿಮರ ಮೊಹರಂ ಹಬ್ಬದ ದಿನ ಬಾಬಯ್ಯನನ್ನು ಊರ ತುಂಬಾ ಹೆಗಲು ಮೇಲೆ ಹೊತ್ತು ಮೆರವಣಿಗೆ ಮಾಡುವುದು ಹಿಂದೂ ಸಮುದಾಯದ ಯುವಕರು. ಹುಲಿ ವೇಷ, ಪಾಳೆಗಾರರ ವೇಷ ಹಾಕುವುದು, ಬೆಳಿಗ್ಗೆ ಕೊಂಡ ಹಾಯುವುದು, ಹಿಂದೂ ಯುವಕರೆ, ಇದಲ್ಲವೇ ನಿಜವಾದ ಭಾವೈಕ್ಯತೆಯ ಸಂಗಮ.
-ಬೂಕನಕೆರೆ ವಿಜೇಂದ್ರ, ಮೈಸೂರು


