Mysore
23
overcast clouds

Social Media

ಸೋಮವಾರ, 21 ಸೆಪ್ಟೆಂಬರ್ 2026
Light
Dark

ರಸ್ತೆ ಡುಬ್ಬ ನಿರ್ಮಿಸಿ; ಅಪಘಾತ ತಪ್ಪಿಸಿ

ಪ್ರಶಾಂತ್ ಎಸ್.

ಬೊಂತಗಳ್ಳಿ ಸೇತುವೆ, ತಂತಿಗುಳ್ಳು ತಿರುವಿನಲ್ಲಿ ಹಂಪ್, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಗ್ರಾಮಸ್ಥರ ಆಗ್ರಹ 

ಮೈಸೂರು: ಬನ್ನೂರು ಮುಖ್ಯ ರಸ್ತೆಯಲ್ಲಿನ ಬೊಂತಗಳ್ಳಿ ಸೇತುವೆಯಿಂದ ತಂತಿಗುಳ್ಳು ಗ್ರಾಮದೆಡೆಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ ಸಂಭವಿಸುವ ಸಾಧ್ಯತೆಗಳು ಇವೆ. ಏಕೆಂದರೆ ಸ್ಥಳದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕುವುದಕ್ಕೆ ಯಾವುದೇ ಡುಬ್ಬಗಳು ಅಥವಾ ಬ್ಯಾರಿಕೇಡ್‌ಗಳು ಇಲ್ಲ. ಹಾಗಾಗಿ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿ ಹಲವರ ಪ್ರಾಣ ಹಾನಿಯಾಗಿದೆ.

ಸೂಚನಾ ಫಲಕವಿಲ್ಲದ್ದರಿಂದ ಅಪಘಾತ- ಗ್ರಾಮಸ್ಥರ ಆರೋಪ: ತಂತಿಗುಳ್ಳು ಹಾಗೂ ಸುತ್ತ ಮುತ್ತಲಿನ ಗ್ರಾಮದವರು ಈ ರಸ್ತೆಯ ಮೂಲಕವೇ ಹಾದು ಹೋಗಬೇಕಿದೆ. ಹೀಗಾಗಿ ಇಲ್ಲಿ ಇನ್ನಷ್ಟು ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗುವ ಮುನ್ನ ಬ್ಯಾರಿಕೇಡ್, ರಸ್ತೆ ಡುಬ್ಬಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ:  ಅಪಘಾತ ಸಂಭವಿಸುತ್ತಿರುವ ಜಾಗದಲ್ಲಿ ರಸ್ತೆ ಡುಬ್ಬ ಗಳು, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

” ರಸ್ತೆ ಉತ್ತಮವಾದಾಗ ಸವಾರರು ಬೇಕಾಬಿಟ್ಟಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ವಾಹನ ಸವಾರರು ಅರ್ಥ ಮಾಡಿಕೊಂಡು ನಿಧಾನವಾಗಿ ವಾಹನಗಳನ್ನು ಚಲಿಸಬೇಕು.”

-ಬಿ.ಎಂ.ಹರೀಶ್, ಸ್ಥಳೀಯರು

” ಸಾರಿಗೆ ಬಸ್‌ಗಳು ಸೇರಿದಂತೆ ಇತರೆ ವಾಹನ ಸವಾರರು ವೇಗದ ಮಿತಿಯನ್ನು ದಾಟಿ ವಾಹನಗಳನ್ನು ಚಾಲನೆ ಮಾಡುತ್ತಿರು ವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಬ್ಯಾರಿಕೇಡ್, ರಸ್ತೆ ಡುಬ್ಬ ನಿರ್ಮಿಸಿ.”

-ನಿಂಗರಾಜು, ಬೈಕ್ ಸವಾರ

” ಈ ರಸ್ತೆಯಲ್ಲಿ ಯಾವುದೇ ರಸ್ತೆ ಡುಬ್ಬಗಳು, ಬ್ಯಾರಿಕೇಡ್‌ಗಳು ಇಲ್ಲದಿರುವ ಕಾರಣ ಅಪಘಾತಗಳು ಸಂಭವಿಸುತ್ತಿದ್ದು, ತಕ್ಷಣವೇ ಸಮಸ್ಯೆಗೆ ಪರಿಹಾರ ಮಾಡಬೇಕಿದೆ.”

-ಸಾಕಪ್ಪ , ಸ್ಥಳೀಯರು

” ಈ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಸೂಚನಾ ಫಲಕ ಅಳವಡಿಸಿ ಅಪಘಾತಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.”

-ಜಯರಾಮು, ಸ್ಥಳೀಯರು

” ಆಗಾಗ್ಗೆ ಸಂಭವಿಸುತ್ತಿರುವ ಅಪಘಾತಗಳನ್ನು ತಪ್ಪಿಸಲು ಹಂಪ್ಸ್ ಅಳವಡಿಸಬೇಕು. ರಸ್ತೆ ಡುಬ್ಬ ಕಾಣುವಂತೆ ಬಣ್ಣ ಬಳಿಯಬೇಕು ಅಥವಾ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು.”

-ಸ್ವಾಮಿ, ನಿವಾಸಿ

” ಬೊಂತಗಳ್ಳಿ ರಸ್ತೆಯಲ್ಲಿ ಸೂಚನಾ ಫಲಕ, ಬ್ಯಾರಿಕೇಡ್, ರಸ್ತೆ ಡುಬ್ಬಗಳಿಲ್ಲದ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು.”

-ಪಿ.ಚಂದನ್‌ಕುಮಾರ್, ಬೈಕ್ ಸವಾರ

 

 

Tags:
error: Content is protected !!