ದೇಶದ ಬಹುತೇಕ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್‌ಗಳಲ್ಲಿ ಸಾರ್ವಜನಿಕರು ಕುಡಿಯುವ ವಾಟರ್ ಕೂಲರ್‌ಗಳಲ್ಲಿ, ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ), ವರದಿ ನೀಡಿದೆ. ರೈಲು ಗಾಡಿಯಲ್ಲಿ ಪ್ರಯಾಣಿಸುವ , ಪ್ರಯಾಣಿಕರಿಗೆ ಇದೊಂದು ಆತಂಕದ ಸಂಗತಿ.
ರೈಲು ಗಾಡಿಯಲ್ಲಿ ಪ್ರಯಾಣಿಸುವ ಬಹುತೇಕ ಮಧ್ಯಮ ವರ್ಗದ ಮತ್ತು ಬಡ ವರ್ಗದ ಪ್ರಯಾಣಿಕರು, ರೈಲು ಇಲಾಖೆಯು ಅಳವಡಿಸಿರುವ ವಾಟರ್ ಕೂಲರ್ ನೀರನ್ನೇ ಕುಡಿಯುತ್ತಾರೆ. ದೇಶಾದ್ಯಂತ ಸುಮಾರು ೬೦೦ ರೈಲ್ವೆ ಪ್ಲಾಟ್ -ರಂಗಳ ವಾಟರ್ ಕೂಲರ್‌ಗಳ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಬಹುತೇಕ ಪ್ಲಾಟ್ -ರ್ಮ್‌ಗಳಲ್ಲಿನ ವಾಟರ್ ಕೂಲರ್‌ಗಳಲ್ಲಿ ಇ-ಕೊಲಿ ಬ್ಯಾಕ್ಟೀರಿಯಾ ದೃಢಪಟ್ಟಿರುವುದನ್ನು ಸಿಎಜಿ ತನ್ನ ವರದಿಯಲ್ಲಿ ನೀಡಿದೆ. ಇಂತಹ ಬ್ಯಾಕ್ಟೀರಿಯಾ ಇರುವ ನೀರನ್ನು ಕುಡಿಯುವುದರಿಂದ, ಅತಿಸಾರ ಮತ್ತು ಕಿಡ್ನಿ ವೈಫಲ್ಯದಂತಹ ಭೀಕರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬಹುತೇಕ ಎಲ್ಲ ರೈಲು ಪ್ಲಾಟ್ ಫಾರ್ಮ್‌ಗಳಲ್ಲಿ ಶುದ್ಧ ಕುಡಿಯುವ ನೀರು ಎಂದು ಬೋರ್ಡು ಹಾಕಿರುತ್ತಾರೆ. ಇವರನ್ನು ನಂಬಿ ಜನರು ನೀರು ಕುಡಿಯುತ್ತಾರೆ, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿದರೆ, ಅದಕ್ಕೆ ಯಾರು ಹೊಣೆ ? ಇಷ್ಟು ದಿನಗಳಿಂದ ಇಂತಹ ಇ-ಕೋಲಿ ಬ್ಯಾಕ್ಟೀರಿಯಾ ಇರುವ ನೀರನ್ನು ಕುಡಿದವರ ಗತಿ ಏನು?
-ಬೂಕನಕೆರೆ ವಿಜೇಂದ್ರ, ಮೈಸೂರು



