Mysore
23
scattered clouds

Social Media

ಶುಕ್ರವಾರ, 02 ಅಕ್ಟೋಬರ್ 2026
Light
Dark

ಓದುಗರ ಪತ್ರ: ಕೆಎಸ್‌ಪಿಸಿಬಿಯನ್ನು ರಾಜಕೀಯ ಮುಕ್ತಗೊಳಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ ಮಾರಕವಾಗಿದೆ.

ಮಂಡಳಿಯ ಶೇ.೭೦ ಕ್ಕೂ ಹೆಚ್ಚು ತಾಂತ್ರಿಕ ಹುದ್ದೆಗಳು ಖಾಲಿಯಿರುವ ಬಗ್ಗೆ ವರದಿಗಳಿವೆ. ದಕ್ಷ ನಾಯಕತ್ವದ ಕೊರತೆಯಿಂದಾಗಿ ರಾಜ್ಯದ ಶೇ. ೮೫ ರಷ್ಟು ಕೆರೆಗಳು ಹೆಚ್ಚಿನ ರೀತಿಯಲ್ಲಿ ಕಲುಷಿತಗೊಂಡಿವೆ. ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೇವಲ ಪುನರ್ವಸತಿ ಕೇಂದ್ರಗಳಲ್ಲ. ಅವು ವೈಜ್ಞಾನಿಕವಾಗಿ ಆಡಳಿತ ನಡೆಸಬೇಕಾದ ಶಾಸನಬದ್ಧ ಸಂಸ್ಥೆಗಳು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಉಚ್ಚ ನ್ಯಾಯಾಲಯಗಳು ತಜ್ಞರ ನೇಮಕಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸರ್ಕಾರಗಳು ಕಾನೂನು ತಿದ್ದುಪಡಿಗಳ ಮೂಲಕ ರಾಜಕೀಯ ‘ಆಪ್ತ’ರನ್ನು ಕೂರಿಸುತ್ತಿರುವುದು ಖಂಡನೀಯ.

ಈ ಸ್ವಜನಪಕ್ಷಪಾತವು ಕೈಗಾರಿಕಾ ತ್ಯಾಜ್ಯ ಮತ್ತು ನದಿ ಮಾಲಿನ್ಯದ ವಿರುದ್ಧದ ಕಠಿಣ ಕ್ರಮಗಳನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ. ಕೆಎಸ್ ಪಿಸಿಬಿಯನ್ನು ರಾಜಕೀಯ ಮುಕ್ತಗೊಳಿಸಿ ಅರ್ಹ ಪರಿಸರ ವಿeನಿಗಳನ್ನು ನೇಮಿಸದಿದ್ದರೆ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆ ಕುಸಿಯುವುದು ನಿಶ್ಚಿತ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!