Mysore
22
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..!

ಅತಿವೃಷ್ಟಿ, ಅನಾವೃಷ್ಟಿಯ ವರದಿ

ಬರೆಯುತಿಹರಂತೆ ಸಚಿವರು…

‘ಒಂಬತ್ತು ಜಿಗಳಲ್ಲಿ

ಮೋಡ ಕವಿದ ವಾತಾವರಣ

ಕಾರಣ, ಅಲ್ಲಿಗಿಲ್ಲ ಮಂತ್ರಿ ಗಿರಿ !

ನುಚ್ಚುನೂರಾಯಿತಂತೆ

ಹಲವು ಶಾಸಕರ ಕನಸು..

ಬರ ಸಿಡಿಲು, ಗುಡುಗು ಜೋರು

ಹಾದಿ ಬೀದಿಗಳಲ್ಲಿ ಬೆಂಕಿ ಟೈರು

ಅಲ್ಲಲ್ಲಿ ಹರಿಯುತ್ತಿಹುದು

ಬಂಡಾಯದ ಹೊಳೆ

ತಾವು ಹೆಜ್ಜೆಯಿಟ್ಟಲ್ಲಿ

ಮಿರಿ ಮಿರಿ ಮಿಂಚು ಹೂಮಳೆ !

 -ಮ.ಗು.ಬಸವಣ್ಣ, ಮೈಸೂರು

Tags:
error: Content is protected !!