ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ ಕೆಳಹಂತದ ರಾಜ್ಯಗಳ ಅನುಮತಿ ಪಡೆಯುವ ಅಗತ್ಯವಿಲ್ಲವೆಂದು ಕೇಂದ್ರ ಜಲಶಕ್ತಿ ಸಚಿವಾಲಯವು ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿರುವುದು ಸ್ವಾಗತಾರ್ಹ.
ತಮಿಳುನಾಡಿಗೆ ನಿಗದಿತ ನೀರನ್ನು ಹರಿಸುವ ಜವಾಬ್ದಾರಿಯನ್ನು ಪೂರೈಸುತ್ತಿರುವಾಗ ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳುವುದು ಕರ್ನಾಟಕದ ನ್ಯಾಯಯುತ ಹಕ್ಕಾಗಿದೆ. ತಮಿಳುನಾಡು ಸರ್ಕಾರದ ಅನಗತ್ಯ ರಾಜಕೀಯ ವಿರೋಧಕ್ಕೆ ಯಾವುದೇ ಕಾನೂನಾತ್ಮಕ ಆಧಾರವಿಲ್ಲ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಈ ಯೋಜನೆ ಅತ್ಯಗತ್ಯ. ಆದ್ದರಿಂದ, ರಾಜ್ಯ ಸರ್ಕಾರವು ಪರಿಷ್ಕೃತ ವರದಿಯನ್ನು ತಕ್ಷಣ ಸಲ್ಲಿಸಿ, ಈ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ಅನುಷ್ಠಾನಗೊಳಿಸಲಿ.
-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು



