Mysore
24
overcast clouds

Social Media

ಶುಕ್ರವಾರ, 17 ಜುಲೈ 2026
Light
Dark

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಓದುಗರ ಪತ್ರ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಸ್ಸುಗಳಲ್ಲಿ ಬೆಟ್ಟ ತಲುಪಿದರೆ, ಮತ್ತಷ್ಟು ಜನರು ಬೆಟ್ಟದ ೧೦೦೧ ಮೆಟ್ಟಿಲುಗಳನ್ನು ಹತ್ತಿ ದೇವಿಯ ದರ್ಶನಕ್ಕೆ ಬರುತ್ತಾರೆ.

ಮೆಟ್ಟಿಲುಗಳ ಮೂಲಕ ಬಂದಂತಹ ಭಕ್ತರಿಗೆ ನೇರವಾಗಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಲು ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಮುಂಜನೆಯೇ ಬೇಗ ಎದ್ದು ಮೆಟ್ಟಿಲುಗಳನ್ನು ಹತ್ತಿ ಬರುವವರು ಮತ್ತೆ ಸಾಲುಗಳಲ್ಲಿ ನಿಲ್ಲಬೇಕೆಂದರೆ ಹಲವರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹಾಗಾಗಿ ಇಂತಹ ಭಕ್ತರಿಗೆ ನೇರವಾಗಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಉತ್ತಮ. ಜತೆಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳನ್ನು ನಿಗದಿಮಾಡುವತ್ತ ಜಿಲ್ಲಾ ಉಸ್ತುವಾರಿ ಸಚಿವರು ಜಿಡಳಿತಕ್ಕೆ ಸೂಚಿಸಿದರೆ ಸಹಕಾರಿಯಾಗುತ್ತದೆ.

-ನಾಗೇಶ್, ಮೈಸೂರು

 

Tags:
error: Content is protected !!