Mysore
22
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಓದುಗರ ಪತ್ರ: ಎಸ್‌ಐಆರ್: ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್‌ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ ಬಗ್ಗೆ ಈಗಾಗಲೇ ಪ್ರಕಟವಾಗಿದ್ದು, ಈ ಬಗ್ಗೆ ಆಕ್ಷೇಪಣೆಗಳು ಮತ್ತು ತಕರಾರುಗಳನ್ನು ಸಾರ್ವಜನಿಕರು ಎತ್ತಿದ್ದಾರೆ. ರಾಜ್ಯದ ಮುಖ್ಯ ಚುನಾವಣಾ ಆಯುಕ್ತರು ಕೂಡ ನಿವಾಸಿಗಳಿರುವ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಲು ತಿಳಿಸಿದ್ದಾರೆ. ಆದರೆ ನಾವು ವಾಸಿಸುವ ಬಡಾವಣೆಗೆ ಬಿಎಲಒಗಳು ಬಂದು ಅಗತ್ಯ ಫಾರಂಗಳನ್ನು ನೀಡಿ, ಅವುಗಳನ್ನು ಭರ್ತಿ ಮಾಡುವ ಬಗ್ಗೆ ತಿಳಿವಳಿಕೆ ನೀಡಿ ಅವುಗಳನ್ನು ಭರ್ತಿ ಮಾಡಿದ ನಂತರ ನಾವೇ ಬರುತ್ತೇವೆ ಅಥವಾ ನಾವಿರುವ ಶಾಲೆಗೆ ಬಂದೂ ನೀಡಬಹುದು ಎಂದು ತಿಳಿಸಿ ಹೋಗಿರುತ್ತಾರೆ.

ಆದರೆ ದಿನಾಂಕ ೪.೭.೨೦೨೬ ರಂದು ನಮ್ಮ ಮನೆಯ ಮತದಾರರ ವಿವರಗಳ -ರಂ ಅನ್ನು ತುಂಬಿಸಿ ನಾನು ನಗರದ ಹೆಬ್ಬಾಳಿನಲ್ಲಿನ ಅವರಿದ್ದ ಶಾಲೆಗೆ ಹೋದಾಗ, ಅಲ್ಲಿ ಕಂಡು ಬಂದದ್ದು, ಶಾಲೆಯ ಆಡಳಿತ ವರ್ಗ ಅವರನ್ನು ಕೆಲಸಕ್ಕೆ ಅನುವು ಮಾಡದೇ ಇರುವುದು. ಅದಾಗಲೇ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಅಲ್ಲಿಗೆ ಬಂದಿದ್ದು ಮತ್ತು ಅವರಿಗೆ ಕನಿಷ್ಟ ಸೌಜನ್ಯವನ್ನೂ ತೋರದೆ ಅವರು ರಸ್ತೆಯಲ್ಲಿಯೇ ನಿಂತಿದ್ದನ್ನು ನೋಡಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳೇ ಹೀಗೆ ಸರ್ಕಾರಿ ಕೆಲಸಕ್ಕೆ ನಿಯೋಜನೆಯಾಗುವ ಶಿಕ್ಷಕರಿಗೆ ಕೆಲಸಕ್ಕೆ ಅನುವು ಮಾಡದಿರುವ ಬಗ್ಗೆ ಗೊಂದಲ ಮೂಡುತ್ತಿದೆ. ಇಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಕೆಲಸಗಳಿಗೆ ಕೈ ಜೋಡಿಸುವ ಬದಲು, ತಮ್ಮ ಸಿಬ್ಬಂದಿ ಶಿಕ್ಷಕರನ್ನು ನಿಯೋಜಿಸದೆ, ಇಲಾಖೆಯ ಕೆಂಗಣ್ಣಿಗೆ ಗುರಿಯಾಗುವಂತೆ ನಡೆದುಕೊಳ್ಳುವ ವರ್ತನೆ ಸಲ್ಲ.

ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಂಬಂಽಸಿದ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಎಚ್ಚರಿಕೆ ನೀಡಿ, ನಿಯೋಜಿಸುವ ಶಿಕ್ಷಕ ವೃಂದಕ್ಕೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ತಿಳಿಸುವುದು ಅವಶ್ಯ.

– ವಿಜಯ್ ಹೆಮ್ಮಿಗೆ, ಮೈಸೂರು

Tags:
error: Content is protected !!