Mysore
29
broken clouds

Social Media

ಸೋಮವಾರ, 21 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಕಾಲಾವಕಾಶ ನೀಡಬೇಕು

ಓದುಗರ ಪತ್ರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸದ್ಯ,ಪೊಲೀಸ್ ಇಲಾಖೆಯ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಲಿಖಿತ ಪರೀಕ್ಷಾ ದಿನಾಂಕ ಕೂಡ ನಿಗದಿ ಮಾಡಿದೆ. ಹಲವಾರು ವರ್ಷಗಳಿಂದ ಹುದ್ದೆ ಬಯಸಿ ಅಧ್ಯಯನದಲ್ಲಿ ತೊಡಗಿರುವ ಆಕಾಂಕ್ಷಿಗಳಿಗೆ ಖಂಡಿತ ತೊಂದರೆ ಆಗದು.

ಆದರೆ, ಖಾಸಗಿ ಸಂಸ್ಥೆಗಳಲ್ಲಿ ಇನ್ನಿತರ ಕಡೆ ಅರೆ ಕಾಲಿಕ ಕೆಲಸ ನಿರ್ವಹಿಸುತ್ತ ತಮ್ಮ ಕುಟುಂಬದ ಜೀವನಕ್ಕೂ ಸಹಾಯ ಮಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸುವ ಅಸಂಖ್ಯಾತ ಅಭ್ಯರ್ಥಿಗಳಿಗೆ ಸಮಯಾವಕಾಶ ಇಲ್ಲದೆ ಈ ವೇಳಾಪಟ್ಟಿಯಂತೂ ಸದ್ಯ ಕಬ್ಬಿಣದ ಕಡಲೆ ಆಗಿದೆ.

ಮುಂಬರುವ ಅಧಿಸೂಚನೆಗಳಲ್ಲಿ ರಾಜ್ಯ ಸರ್ಕಾರದ ಪ್ರತಿಯೊಂದು ಪರೀಕ್ಷೆಗಳಲ್ಲೂ ಎಲ್ಲ ರೀತಿಯ ಅಭ್ಯರ್ಥಿಗಳನ್ನು ಪರಿಗಣಿಸಿ ಸರ್ವರಿಗೂ ಒಳಿತಾಗುವ ದೃಷ್ಟಿಯಿಂದ ಕೆಪಿಎಸ್‌ಸಿ ಅಥವಾ ಕೆಇಎ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ ನಂತರ ಪರೀಕ್ಷೆ ಬರೆಯುವ ದಿನಾಂಕವನ್ನು ಕನಿಷ್ಠ ನೂರು ದಿನಗಳ ಕಾಲಾವಕಾಶ ಮಿತಿ ಕಡ್ಡಾಯವಾಗಿ ನೀಡಬೇಕಿದೆ.

 – ಅನಿಲ್ ಕುಮಾರ್, ನಂಜನಗೂಡು.

 

Tags:
error: Content is protected !!